ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ,ತಪ್ಪಿದ ಭಾರೀ ಅಗ್ನಿ ಅನಾಹುತ
Friday, February 14, 2025
ಮುಲ್ಕಿ: ಬೈಹುಲ್ಲು ಸಾಗಾಟಮಾಡುತ್ತಿದ್ದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮೂಲ್ಕಿ ಸಮೀಪದ ಕಿಲ್ಪಾಡಿ ಶಿಮಂತೂರು ರಸ್ತೆಯ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ.ಘಟನೆಯಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು,ಭಾರೀ ಅಗ್ನಿ ಅನಾಹುತವೊಂದು ತಪ್ಪಿದೆ. ಮುಲ್ಕಿ ಕಡೆಗೆ ಬೈಹುಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಬರುತ್ತಿದ್ದು ಕಲ್ಲಗುಡ್ಡೆ ಬಳಿಯ ತೀರಾ ಇಕ್ಕಟ್ಟಾದ ರಸ್ತೆಯಲ್ಲಿ ಆಟೋ ರಿಕ್ಷಾವೊಂದಕ್ಕೆ ಸೈಡ್ ಕೊಡಲು ಹೋದ ಸಂದರ್ಭ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ತಂತಿ ಲಾರಿ ಮೇಲೆ ಬಿದ್ದು ವಿದ್ಯುತ್ ಕಿಡಿ ಉಂಟಾಗಿದೆ
ಆಗ ಲಾರಿ ಚಾಲಕ ಕೂಡಲೇ ಕಾರ್ಯಪ್ರವೃತ್ತರಾಗಿ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿದ್ದು ಕೂದಲೆಳೆ ಅಂತರದಲ್ಲಿ ಭಾರೀ ಅಗ್ನಿ ಅನಾಹುತ ತಪ್ಪಿದೆ.
ವಿದ್ಯುತ್ ಕಂಬ ಮುರಿದು ಬಿದ್ದ ಕಾರಣ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು,
ಸ್ಥಳಕ್ಕೆ ಮುಲ್ಕಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಹೊಸ ವಿದ್ಯುತ್ ಕಂಬ ಅಳವಡಿಸಿದ್ದಾರೆ.