ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಶ್ರೀ ಚಕ್ರಾಬ್ಜ ಮಂಡಲ ಪೂಜೆ, ಉತ್ಸವ ಬಲಿ
ಮುಲ್ಕಿ: ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕ್ಷೇತ್ರದ ತಂತ್ರಿಗಳಾದ ಶಿಬರೂ ರು ಗೋಪಾಲಕೃಷ್ಣ ತಂತ್ರಿ ಹಾಗೂ ಕ್ಷೇತ್ರದ ಅರ್ಚಕ ಹಯಗ್ರೀವ ಪಡ್ಡಿಲಾಯ ನೇತೃತ್ವದಲ್ಲಿ ರಾತ್ರಿ ಚಕ್ರಾಬ್ಜ ಮಂಡಲ ಪೂಜೆ, ಶಕ್ತಿ ಹೋಮ ಅಷ್ಟ ಬಂದ ಸ್ಥಾಪನೆ ಹಾಗೂ ಪಿ ದೇವರ ಉತ್ಸವ ಬಲಿ ನಡೆಯಿತು.
ಈ ಸಂದರ್ಭ ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು,
ದೇವಸ್ಥಾನದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜಾ, ವ್ಯವಸ್ಥಾಪನಾ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾದ ಜೀವನ್ ಶೆಟ್ಟಿ,
ರವಿಕುಮಾರ್, ಶಶೀoದ್ರ ಸಾಲ್ಯಾನ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಹರ್ಷರಾಜ ಶೆಟ್ಟಿ, ಸುರೇಶ್ ರಾವ್, ವಿಷ್ಣುಮೂರ್ತಿ, ಪ್ರವೀಣ್ ಕೋಟ್ಯಾನ್, ಕೃಷ್ಣ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು
ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಫೆಬ್ರವರಿ 16ರಂದು 8:15ಕ್ಕೆ ಕುಂಭಲಗ್ನದಲ್ಲಿ ಅಷ್ಟ ಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ