ಮುಲ್ಕಿ:ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯ ಧ್ವಜಾರೋಹಣ
Friday, February 14, 2025
ಮುಲ್ಕಿ: ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿರುವ ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಧ್ವಜಾರೋಹಣ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲ ಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಉತ್ಸವ ಬಲಿ ಹೊರಟು ಶ್ರೀ ದೇವರ ಧ್ವಜಾರೋಹಣ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಎಮ್ ಎಚ್ ಅರವಿಂದ ಪುಂಜ ಮತ್ತು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು