-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಭಜನಾ ಮಂಗಳೋತ್ತ್ಸವ ಉದ್ಘಾಟನೆ

ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಭಜನಾ ಮಂಗಳೋತ್ತ್ಸವ ಉದ್ಘಾಟನೆ


ಮೂಲ್ಕಿ : ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ಪುನರೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.
ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.  
ಈ ಸಂದರ್ಭದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಪಡುಪಣಂಬೂರು ಗ್ರಾಮ ಪಂಚಾಯತ್‌ನ ಸದಸ್ಯ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಉದ್ಯಮಿ ಕೆರೆಕಾಡು ದಿಶಾ ಟ್ರೇಡರ್ಸ್‌ನ ಮಾಲೀಕ ಪ್ರದೀಪ್‌ಕುಮಾರ್, ಹರೀಶ್ ಪೂಜಾರಿ, ಶಿಕ್ಷಕಿ ಸುಜಾತಾ ನಾರಾಯಣ್ ಭಂಡಾರಿ, ಯೋಗಧಾಮದ ಜ್ಯೋತಿ ದೇವದಾಸ್ ರಾವ್, ಅರ್ಚಕ ರಾಘವೇಂದ್ರ ರಾವ್, ಮೂಲ್ಕಿ ಎಲ್‌ಐಸಿ ಶಾಖಾ ಪ್ರಬಂಧಕ  ಪ್ರಕಾಶ್ ಆಚಾರ್ಯ, ಮಾಧವ ಶೆಟ್ಟಿಗಾರ್, ರತ್ನ ಶಿವಾನಂದ ಕೋಟ್ಯಾನ್, ಕರುಣಾಕರ್, ಲಕ್ಷ್ಮಣ್ ಪೂಜಾರಿ, ಮನೋಹರ್ ಕುಂದರ್, ಸುರೇಂದ್ರ ಪದ್ಮಶಾಲಿ, ಲಲಿತಾ ಭಾಸ್ಕರ್ ಕೆರೆಕಾಡು ಮತ್ತಿತರರು ಇದ್ದರು.
ಚೇತನ್ ಪುನರೂರು ಸ್ವಾಗತಿಸಿದರು, ಸತೀಶ್ ವಂದಿಸಿದರು, ರಾಜೇಶ್ ಪಿ.ಆರ್. ಕಾರ್ಯಕ್ರಮ ನಿರೂಪಿಸಿದರು. 
ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಿತು. 

-೦-
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ