
ಶ್ರೀ ಹರಿಹರ ರಾಮ ಭಜನಾಮಂದಿರ ರಾಮ ನಗರ ಗೋಳಿಜೋರ , ನೂತನ ಮಹಾದ್ವಾರ ಸಮರ್ಪಣೆ,ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ
Friday, February 7, 2025
ಕಿನ್ನಿಗೋಳಿ:ಶ್ರೀ ಹರಿಹರ ರಾಮ ಭಜನಾಮಂದಿರ ರಾಮ ನಗರ ಗೋಳಿಜೋರ ಇಲ್ಲಿನ ನೂತನ ಮಹಾದ್ವಾರ ಸಮರ್ಪಣೆ,ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ ಬುಧವಾರ ನಡೆಯಿತು. ಪಟೇಲ್ ವಾಸುದೇವ ರಾವ್ ಪುನರೂರು ಮತ್ತು ಸೇವಾಕರ್ತರಾದ ಅಭಿಲಾಷ್ ಶೆಟ್ಟಿ ಕಟೀಲು ನೂತನ ದ್ವಾರವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ದಿನೇಶ್ ಭಂಡ್ರಿಯಾಲ್ ತಾಳಿಪಾಡಿಗುತ್ತು, ವೇದವ್ಯಾಸ ಉಡುಪ, ನಾಗ ವಿ ಭಟ್, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ಪ್ರಕಾಶ್ ಸಾಲಿಯಾನ್, ರಾಮ ಗುರಿಕಾರ, ಸಮಿತಿಯ ಸಂತೋಷ್ ಕುಮಾರ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಧನಂಜಯ ಪಿ ಶೆಟ್ಟಿಗಾರ್, ದಿವಾಕರ ಕರ್ಕೇರ, ಸಂಜೀವ ಎಂ, ನವನೀತ್ ಗೋಳಿಜೋರ, ಪ್ರಕಾಶ್ ಆಚಾರ್ಯ, ಚಂದ್ರಶೇಖರ್ ಟಿ , ಶಂಕರ್ ಮಾಸ್ಟರ್, ರಘು ಗೋಳಿಜೋರ, ಪ್ರಕಾಶ್ ಸಾಲಿಯಾನ್, ಉಮೇಶ್ ಎಂ ಮತ್ತಿತರರು ಉಪಸ್ಥಿತರಿದ್ದರು.