ಪ್ರಾಮಾಣಿಕ ಸೇವೆಯಿಂದ ಯಶಸ್ಸು ಸಾದ್ಯ- ಕುಶಾಲ್ ಪೂಜಾರಿ
Tuesday, February 4, 2025
ಕಿನ್ನಿಗೋಳಿ: ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಯೋಗ, ಗ್ರಾಮಸ್ಥರ ಸಹಕಾರದಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮ ಯಶಸ್ವಿ ಯಾಗಿದೆ ಎಂದು ತಾಳಿಪಾಡಿ ಲಕ್ಷೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಕುಶಲ ಪೂಜಾರಿ ಹೇಳಿದರು.ಅವರು ತಾಳಿಪಾಡಿಯಲ್ಲಿ ನಡೆದ ಬಪ್ಪನಾಡು ಯಕ್ಷಗಾನ ಬಯಲಾಟ ಸಂದರ್ಭ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹೆಸರಿಗಾಗಿ ಬಯಸದೆ ಪ್ರಾಮಾಣಿಕ ಸೇವೆಯಿಂದ ಯಶಸ್ಸು, ಹೆಸರು ಸಾದ್ಯ ಎಂದರು. ಈ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಅರ್ಚಕ ಗುರುರಾಜ ಭಟ್, ಜಲಜ ಕೋಟ್ಯಾನ್ , ಸುಮತಿ ಅಡಪೋಳಿ ಅವರನ್ನು ಸನ್ಮಾನಿಸಲಾಯಿತು. ಸಂದರ್ಭ ಸಂಪ ಸಾಲಿಯಾನ್, ಅರುಣ್ ಸಾಲಿಯಾನ್, ರಾಘವೇಂದ್ರ ಭಟ್, ಶಿವಾನಂದ್ ಸಾಲಿಯಾನ್,ಸುನೀತಾ ಅರುಣ್ ಮತ್ತಿತರರು ಉಪಸ್ಥಿತರಿದ್ದರು. ಉದಯ ಪೂಂಜ ತಾಳಿಪಾಡಿಗುತ್ತು ಸನ್ಮಾನ ಪತ್ರವಾಚಿಸಿದರು.