
ಫೆ 5 - 9 : ಶ್ರೀ ಹರಿಹರ ರಾಮ ಭಜನಾಮಂದಿರ ರಾಮನಗರ ಗೋಳಿಜೋರ , ನೂತನ ಮಹಾದ್ವಾರ ಸಮರ್ಪಣೆ, ಬ್ರಹ್ಮ ಕುಂಭಾಭಿಷೇಕ ಮತ್ತು ವಾರ್ಷಿಕ ಭಜನಾ ಮಂಗಲದ ಸುವರ್ಣ ಮಹೋತ್ಸವ
Wednesday, February 5, 2025
ಕಿನ್ನಿಗೋಳಿ:ಶ್ರೀ ಹರಿಹರ ರಾಮ ಭಜನಾಮಂದಿರ ರಾಮನಗರ ಗೋಳಿಜೋರ ಇಲ್ಲಿನ ನೂತನ ಮಹಾದ್ವಾರ ಸಮರ್ಪಣೆ, ಬ್ರಹ್ಮ ಕುಂಭಾಭಿಷೇಕ ಮತ್ತು ವಾರ್ಷಿಕ ಭಜನಾ ಮಂಗಲದ ಸುವರ್ಣ ಮಹೋತ್ಸವವು ಫೆ 5 ರಿಂದ 9 ರ ವರೆಗೆ ನಡೆಯಲಿದೆ. ಫೆ 7 ರಂದು ಬ್ರಹ್ಮ ಕುಂಭಾಭಿಷೇಕ ಮದ್ಯಾಹ್ನ ಅನ್ನಸಂತರ್ಪಣೆ ಮತ್ತು ಉತ್ಸವದ ದಿನಗಳಲ್ಲಿ ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ನೂತನ ಮಹಾದ್ವಾರದ ಲೋಕಾರ್ಪಣೆ ಮಾತ್ರವಲ್ಲದೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ 5 ರಂದು ಸಂಜೆ ಭಕ್ತಿ ರಸ ಮಂಜರಿ, ನಂತರ ಕಿನ್ನಿಗೋಳಿ ವಿಜಯ ಕಲಾವಿದರಿಂದ ಅಮ್ಮು ಅಮುಂಡರಾ ತುಳು ನಾಟಕ, ಫೆ 6 ರಂದು ರಾತ್ರಿ 7.00 ವಿಧಾರ್ತಿ ಕಲಾವಿದರು ಕುಡ್ಲ ಇವರಿಂದ ದೈವರಾಜೆ ಶ್ರೀ ಬಬ್ಬು ಸ್ವಾಮಿ ತುಳು ಭಕ್ತಿ ಪ್ರಧಾನ ನಾಟಕ, ಫೆ 7 ರಂದು ಮದ್ಯಾಹ್ನ 12.00 ರಿಂದ ಜೆ ಉತ್ತಮ ಕುಮಾರ್ ಕೊಡಿಯಾಲ್ ಬೈಲ್ ಅವರಿಂದ ದಾಸವಾಣಿ ಸಂಜೆ 6.00 ರಿಂದ ನಟರಾಜ ನೃತ್ಯ ರೂಪಕ ತಂಡ ಕಿನ್ನಿಗೋಳಿ ಇವರಿಂದ ವೈವಿದ್ಯಮಯ ಕಾರ್ಯಕ್ರಮ ಸಂಜೆ 7.00 ರಿಂದ ಮೋಹಿನಿ ಕಲಾ ಸಂಪದ ಕಿನ್ನಿಗೋಳಿ ಇವರಿಂದ ವೀರ ತರುಣಿಸೇನಾ ಯಕ್ಷಗಾನ ಬಯಲಾಟ ನಡೆಯಲಿದೆ,