ಫೆ.13ರಿಂದ 15ರ ತನಕ ಗುರುಪುರ ಬಂಡಿ ಜಾತ್ರೆ
Monday, February 10, 2025
ಗುರುಪುರ : ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಕಾಲಾವಧಿ `ಬಂಡಿ' ಜಾತ್ರೆ ಫೆ. 13ರಿಂದ 15ವರೆಗೆ ನಡೆಯಲಿದೆ.
ಫೆ. 13ರಂದು ಮುಂಜಾನೆ 5 ಗಂಟೆಗೆ ಭಂಡಾರ ಮನೆಯಿಂದ ದೈವಸ್ಥಾನಕ್ಕೆ ಶ್ರೀ ದೈವಗಳ ಭಂಡಾರ ಹೊರಡಲಿದೆ. ಬೆಳಿಗ್ಗೆ 8:30ಕ್ಕೆ ಧ್ವಜಾರೋಹಣ, 11ರಿಂದ 1ರತನಕ ಕಂಚಿಲು ಸೇವೆ ಮತ್ತು ಉರುಳು ಸೇವೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ 10ರಿಂದ ಶ್ರೀ ಮುಂಡಿತ್ತಾಯ ದೈವದ ನೇಮ, ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರದಾನ, ಪ್ರಸಾದ ವಿತರಣೆಯಾಗಲಿದೆ.
ಫೆ. 14ರಂದು ರಾತ್ರಿ 7ರಿಂದ ಶ್ರೀ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಫೆ. 15ರಂದು ರಾತ್ರಿ 7ಕ್ಕೆ ತುಡಾರ ಬಲಿ ಉತ್ಸವ, ಧ್ವಜಾವರೋಹಣ ಹಾಗೂ ಭಂಡಾರ ನಿರ್ಗಮನವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.