'ದುರ್ಗಾಸಂಭ್ರಮ - 2025' ಕಾರ್ಯಕ್ರಮ
Monday, February 17, 2025
ಬಜಪೆ:ಧಾರ್ಮಿಕ,ಸಾಂಸ್ಕೃತಿಕ ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತ ಹಾಗೂ ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳಿಗೆ ಪ್ರೊತ್ಸಾಹವನ್ನು ನೀಡುತ್ತ ಬಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಅವರು ಎಕ್ಕಾರು ದುರ್ಗಾ ಕಲ್ಬರಲ್ ಆ್ಯಂಡ್ ಕ್ರಿಕೆಟ್ ಕ್ಲಬ್ ನ 35ನೇ ವರ್ಷಾಚರಣೆ ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಳಿಯ ದಶಮಾನೋತ್ಸವ ಪ್ರಯುಕ್ತ ಶನಿವಾರ ಎಕ್ಕಾರು ಬಂಟರ ಭವನ ಮೈದಾನದಲ್ಲಿ ನಡೆದ 'ದುರ್ಗಾಸಂಭ್ರಮ 2025' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಹಾಗೂ ಎಕ್ಕಾರು ಶ್ರೀಕೃಷ್ಣ ಮಠದ ವೇ.ಮೂ ಹರಿದಾಸ ಉಡುಪ ಆಶೀರ್ವಚನವನ್ನು ನೀಡಿದರು.
'ದುರ್ಗಾಸಂಭ್ರಮ'ದ ಅಂಗವಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷಿಕ ರೊನಾಲ್ಡ್ ಫೆರ್ನಾಂ ಡಿಸ್ ಪೆರ್ಮುದೆ , ಎಕ್ಕಾರು ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಂತಿ ರಮಾನಂದ ಪೂಜಾರಿ, ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ
ಶಿಕ್ಷಕಿ ವಿದ್ಯಾಲತಾ ಅವರನ್ನು ಗೌರವಿಸಲಾಯಿತು. ಸೋಂದಾ ಭಾಸ್ಕರ ಭಟ್,ಶ್ರೀನಿವಾಸ ಗೌಡ ಬಳ್ಳಮಂಜ,ಅಮ್ಮುಂಜೆ ಮೋಹನ್ ಕುಮಾರ್,ಮೈತ್ರಿ ಭಟ್ ಮೊವ್ವಾರು,ಜಯಶ್ರೀ ಕುಲಾಲ್ , ಅವಿನಾಶ್ ದೇವಾಡಿಗ,ಭಾರತಿ ಶೆಟ್ಟಿ ಹಾಗೂ ಮೊದಲಾದವರನ್ನು ಗುರುವಂದನೆಯ ಮೂಲಕ ಗೌರವಿಸಲಾಯಿತು. ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ
ಆಡಳಿತ ಮೊಕ್ತಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮಕಾವರು), ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಪ್ರವೀಣ ಆಚಾರ್ಯ, ಬಜಪೆ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಡೆನ್ನಿಸ್ ಡಿಸೋಜ, ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಪ್ರಮುಖರಾದ ಈಶ್ವರ ಕಟೀಲು, ಕಸ್ತೂರಿ ಪಂಜ, ಲೋಕಯ್ಯ ಸಾಲ್ಯಾನ್, ಗಿರೀಶ್ ಶೆಟ್ಟಿ ಕಟೀಲು,ತ್ಯಾಗರಾಜ್ ಆಚಾರ್ಯ, ಪ್ರದೀಪ್ ಕುಮಾರ್ ಶೆಟ್ಟಿ, ತು ಕರಾಮ ಬಂಗೇರ, ದುರ್ಗಾ ಕಲ್ಬರಲ್ ಆ್ಯಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಪ್ರಶಾಂತ್, ದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ತೇಜಸ್ವಿನಿ ರಾವ್ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು, ಸುದರ್ಶನ್ ಕಾರ್ಯಕ್ರಮ ನಿರೂ ಪಿಸಿದರು. ವಿದ್ಯಾರ್ಥಿಗಳಿಂದ ಪೂರ್ವರಂಗದ ಹಾಡು ಗಾರಿಕೆ, ನಾಟ್ಯ ವೈಭವ, 'ಮಹಿಷ ಮರ್ಧಿನಿ' ಯಕ್ಷಗಾನ ಪ್ರದರ್ಶನಗೊಂಡಿತು. ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಗೊಂಡಿತು.