-->


ಜ.12 ರಿಂದ ಜ.16 ರ ತನಕ ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ

ಜ.12 ರಿಂದ ಜ.16 ರ ತನಕ ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ

ಎಕ್ಕಾರು:ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆಯು  ಜ.12 ರಿಂದ ಜ.16 ರ ತನಕ ವಿಜೃಂಭಣೆಯಿಂದ ಜರುಗಲಿದೆ.ಜ.11 ರ  ಶನಿವಾರದಂದು ರಾತ್ರಿ ಪೂರ್ವದ ಕಟ್ಟುಕಟ್ಟಳೆಯಂತೆ  ತಾಂಗಾಡಿ ಬರ್ಕೆ  ಕಾವರ ಮನೆಯಿಂದ ದೈವಗಳ ಭಂಡಾರ ಹೊರಟು  ದೇರಿಂಜ ಗಿರಿಗೆ  ಚಿತೈಸಿ ಧ್ವಜಾರೋಹಣ ನೆರವೇರಲಿರುವುದು.ಜ.12 ರ ರವಿವಾರ ಬೆಳಿಗ್ಗೆ ಕಂಚೀಲು ಸೇವೆ, ಉಳ್ಳಾಯ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 9 ರಿಂದ ಶ್ರೀಕೊಡಮಣಿತ್ತಾಯ ದೈವದ ನೇಮೋತ್ಸವ ವು ನಡೆಯಲಿದೆ.ಜ.13 ರ ಸೋಮವಾರ ರಾತ್ರಿ 9 ರಿಂದ  ಶ್ರೀ ಕಾಂತೇರಿ ಜುಮಾದಿ  ದೈವದ ನೇಮೋತ್ಸವ,ಜ.14 ರ  ಮಂಗಳವಾರ ರಾತ್ರಿ 9ರಿಂದ ಶ್ರೀಜಾರಂದಾಯ ದೈವದ ನೇಮೋತ್ಸವ,ಜ.15 ರ  ಬುಧವಾರ ರಾತ್ರಿ 9ರಿಂದ  ಶ್ರೀ ಸರಳ ಜುಮಾದಿ ದೈವದ ನೇಮೋತ್ಸವ,ಜ.16 ರ  ಗುರುವಾರ  ರಾತ್ರಿ 9 ರಿಂದ  ಶ್ರೀ ಪಿಲಿ ಚಾಮುಂಡಿ ದೈವದ ನೇಮೋತ್ಸವ  ಹಾಗೂ ಜ.17 ರ ಶುಕ್ರವಾರ  ಬೆಳಿಗ್ಗೆ 10 ಕ್ಕೆ ಧ್ವಜ ಅವರೋಹಣ ದೊಂದಿಗೆ ವರ್ಷಾವಧಿ ಜಾತ್ರೆಯು ಸಂಪನ್ನಗೊಳ್ಳಲಿರುವುದು.ಜಾತ್ರೋತ್ಸವದ ಪ್ರತಿದಿನದಂದು  ಮಧ್ಯಾಹ್ನ 1 ರಿಂದ ರಾತ್ರಿ 9 ರ ತನಕ ಅನ್ನಸಂತರ್ಪಣೆ ನಡೆಯಲಿದೆ.ಭಕ್ತಾದಿಗಳು  ಜಾತ್ರೋತ್ಸವದ ಪುಣ್ಯ ದಿನಗಳಲ್ಲಿ ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಿ  ಎಂದು  ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article