ಮಾಗಣೆಯ ಎಲ್ಲಾ ಕಂಬಳ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಕಂಬಳ ಯಶಸ್ವಿಯಾಗಿ ನಡೆದಿದೆ - ದುಗ್ಗಣ ಸಾವಂತರು
Monday, January 6, 2025
ಹಳೆಯಂಗಡಿ:ಮೂಲ್ಕಿ ಸೀಮೆಯ ಅರಸು ಕಂಬಳವು ಡಿಸೆಂಬರ್ 22 ರಂದು ಬಹಳ ಯಶಸ್ವಿಯಾಗಿ ನಡೆಯಲು ಮಾಗಣೆಯ ಎಲ್ಲಾ ಕಂಬಳ ಅಭಿಮಾನಿಗಳ ಸಹಕಾರ ಮತ್ತು ಸಂಘ ಸಂಸ್ಥೆಯವರ ಸಹಕಾರದಿಂದ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಾಗಣೆಯ ವ್ಯಾಪ್ತಿಯ 32 ಗ್ರಾಮಗಳಲ್ಲಿ ಕೂಡ ಕಂಬಳದ ಬಗ್ಗೆ ಇನ್ನಷ್ಟು ಅರಿವು ಮೂಡಿಸಿ ಯುವಜನತೆ ಇನ್ನಷ್ಟು ಇದರಲ್ಲಿ ಪಾಲು ಪಡೆಯಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಲ್ಕಿ ಸೀಮೆಯ ಅರಸು ಕಂಬಳ ರುವಾರಿ ಶ್ರೀ ದುಗ್ಗಣ್ಣ ಸಾವಂತರು ಹೇಳಿದರು.ಅವರು ಭಾನುವಾರದಂದು ಮೂಲ್ಕಿ ಅರಮನೆಯಲ್ಲಿ ಕಂಬಳದಲ್ಲಿ ಸಹಕರಿಸಿದ ಎಲ್ಲರಿಗೆ ಕೃತಜ್ಞತಾ ಅರ್ಪಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಗಮಿಸಿದ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ನಾಯಕರುಗಳು ಕಂಬಳ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಅಭಿಪ್ರಾಯ ಮಂಡಿಸಿ ಮುಂದಿನ ದಿನಗಳಲ್ಲೂ ಕೂಡ ಅರಮನೆಯ ಎಲ್ಲ ಸಾಮಾಜಿಕ ಕಳವಳಿಯ ಕಾರ್ಯಕ್ರಮದಲ್ಲಿ ನಾವು ಕೈಜೋಡಿಸುತ್ತೇವೆಂದು ತಿಳಿಸಿದರು.
ವೇದಿಕೆಯಲ್ಲಿ ವಕೀಲರಾದ ಚಂದ್ರಶೇಖರ್ ಜಿ ಕಾಸಪ್ಪಯ್ಯ ಅರಮನೆ, ಅರಮನೆಯ ಗೌತಮ್ ಜೈನ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ವಸಂತ ಬರ್ನಾಡ್ , ಬಂಕಿ ನಾಯಕರು ಉಪಸ್ಥಿತರಿದ್ದರು.
ಶ್ರೀ ನವೀನ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.