ಇಂದಿನಿಂದ ಜ.26ರವರೆಗೆ ಸಸಿಹಿತ್ಲು ಅಗ್ಗಿದಕಳಿಯ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ “ವಿಶ್ವ ಸಮ್ಮೇಳನ”
Friday, January 24, 2025
ಹಳೆಯಂಗಡಿ:ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು,ಸುವರ್ಣ ಮಹೋತ್ಸವ ವರ್ಷಾಚರಣೆ ಸಂಭ್ರಮದಲ್ಲಿದ್ದು,ಸುವರ್ಣ ಮಹೋತ್ಸವ ಸವಿ ನೆನಪಿನಲ್ಲಿ ಕಡಲತಡಿಯ ಗ್ರಾಮದಲ್ಲಿ ಬಿಲ್ಲವ,ತೀಯಾ,ಆರ್ಯ ಈಡಿಗ,ದೀವರು ,ನಾಮಧಾರಿಗಳ 26 ಪಂಗಡಗಳ ವಿಶ್ವ ಸಮ್ಮೇಳನ ಹಾಗೂ ಬಿಲ್ಲವ,ತೀಯಾ,ಆರ್ಯ ಈಡಿಗ,ದೀವರು ,ನಾಮಧಾರಿಗಳ 26 ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸುವರ್ಣ ಸಿರಿ - 2025,ಬೀಚ್ ಫೆಸ್ಟಿವಲ್ ಇಂದಿನಿಂದ ಜ.25 ಹಾಗೂ ಜ.26 ರ ತನಕ ದಿ.ಕಾಂತುಲಕ್ಕಣ ಗುರಿಕಾರರು ಯಾನೆ ಪಠೇಲ್ ಯಾದವ ಜಿ.ಬಂಗೇರ ವೇದಿಕೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣ ,ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ವಠಾರದಲ್ಲಿ ನಡೆಯಲಿದೆ.ಕಾರ್ಯಕ್ರಮಗಳ ಅಂಗವಾಗಿ ಇಂದು ಸಂಜೆ 4 ಕ್ಕೆ ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಿಂದ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಗೊಂಬೆ ಬಳಗ,ಚೆಂಡೆ,ಜಾನಪದ ಕುಣಿತ,ಬಣ್ಣದ ಕೊಡೆ,ಹುಲಿ ವೇಷದೊಂದಿಗೆ ಅದ್ದೂರಿಯ ಜಾನಪದ ಮೆರವಣಿಗೆ ನಡೆಯಲಿದೆ.ಮುಂಬೈಯ ಉದ್ಯಮಿ ಧನಂಜಯ್ ಶೆಟ್ಟಿ ಅವರು ಜಾನಪದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಸಂಜೆ 5:30ಕ್ಕೆ ಸುವರ್ಣ ಸಂಭ್ರಮ ಧ್ವಜಾರೋಹಣ ನೆರವೆರಲಿದೆ.ಮುಂಬೈ ಯ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದ ಶ್ರೀ ಶ್ರೀ ಶ್ರೀ ಸುವರ್ಣ ಬಾಬಾ ರವರು ಧ್ವಜರೋಹಣ ನೆರವೆರಿಸಲಿದ್ದಾರೆ.ಸಂಜೆ 6 ಕ್ಕೆ ಬೀಚ್ ಪೆಸ್ಟಿವಲ್ ನ ಉದ್ಘಾಟನೆ,ಮುಂಬೈ ಅಂಧೇರಿ ಪೂರ್ವ ಸಂಜೀವಿನಿ ಆಸ್ಪತ್ರೆಯ ಡಾ.ಸುರೇಶ್ ರಾವ್ ಉದ್ಘಾಟಿಸಲಿದ್ದಾರೆ.ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ರಮೇಶ್ ಪೂಜಾರಿ ಚೇಳ್ಯಾರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಗಣ್ಯಾತೀಗಣ್ಯರು ಪಾಲ್ಗೊಳ್ಳಲಿದ್ದಾರೆ.ರಾತ್ರಿ 7 ರಿಂದ ಡ್ಯಾನ್ಸ್ ಸ್ಪರ್ಧೆ ಮುಕ್ತ ನೃತ್ಯ ಸ್ಪರ್ಧೆ,ರಾತ್ರಿ 9:30ರಿಂದ ವಿಶ್ವಾಸ್ ಗುರುಪುರ ಬಳಗದವರಿಂದ ಬೀಚ್ ರಸ ಸಂಜೆ ನಡೆಯಲಿದೆ.