ಫೆ.೮ಕ್ಕೆ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ, ಸಿದ್ಧತಾ ಸಭೆ
Wednesday, January 8, 2025
ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದಿಂದ ಐಕಳ ಪಾಂಪೈ ಕಾಲೇಜಿನಲ್ಲಿ ಫೆಬ್ರವರಿ ೮ರಂದು ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿ ಯಶಸ್ಸುಗೊಳಿಸೋಣ ಎಂದು ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ.ಫಾದರ್ ಓಸ್ವಾಲ್ಡ್ ಮೊಂತೆರೋ ಹೇಳಿದರು.
ಅವರು ಬುಧವಾರ ಐಕಳ ಪಾಂಪೈ ಕಾಲೇಜಿನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಸಾಹಿತ್ಯಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಗ್ರಂಥಾಲಯಗಳು ಹಾಗೂ ಓದುಗರನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ಹೇಳಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ ಆಚಾರ್ಯ, ಕಾರ್ಯದರ್ಶಿ ಹಿಲ್ಡಾ, ಸಂಚಾಲಕ ಡಾ. ಪುರುಷೋತ್ತಮ ಕೆ.ವಿ. ತಾಲೂಕು ಕಾರ್ಯದರ್ಶಿ ಹೆರಿಕ್ ಪಾಯಸ್, ವೀಣಾ ಶಶಿಧರ್, ಹೋಬಳಿ ಕಸಾಪ ಅಧ್ಯಕ್ಷ ಜೊಸ್ಸಿ ಪಿಂಟೋ, ರೋಹನ್ ಡಿಕೋಸ್ತ, ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ, ದೇವದಾಸ ಮಲ್ಯ, ಸಚ್ಚಿದಾನಂದ ಉಡುಪ, ಧನಂಜಯ ಶೆಟ್ಟಿಗಾರ್, ಸುಧಾಕರ ಶೆಟ್ಟಿ ಮತ್ತಿತರರಿದ್ದರು.