-->


ತೋಕೂರು:ಕಿರು ಷಷ್ಠಿ  ಜಾತ್ರಾ ಮಹೋತ್ಸವದ ಪ್ರಯುಕ್ತ ಕಟೀಲು ಮೇಳದ ಯಕ್ಷಗಾನ,ಸನ್ಮಾನ ಕಾರ್ಯಕ್ರಮ

ತೋಕೂರು:ಕಿರು ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಟೀಲು ಮೇಳದ ಯಕ್ಷಗಾನ,ಸನ್ಮಾನ ಕಾರ್ಯಕ್ರಮ

ಹಳೆಯಂಗಡಿ: ಊರ ಪರವೂರ ಹತ್ತು ಸಮಸ್ತರ ಮತ್ತು ಯಕ್ಷ ಕಲಾರಂಗ ತೋಕೂರು ಇವರ15ನೇ ವರ್ಷದ ಕಿರು ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಿತು.ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದರಾದ  ನಾರಾಯಣ ಕುಲಾಲ್, ರವಿ ಮುಂಡಾಜೆ, ಸಂದೀಪ್ ಕೋಳ್ಯೂರು, ಭಾಗವತರಾದ ಸತೀಶ್ ಶೆಟ್ಟಿ ಬೊಂದೆಲ್, ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸುಮಾರು ವರ್ಷಗಳಿಂದ ಸೇವಾಕರ್ತರಾಗಿ ಸೇವೆ ಸಲ್ಲಿಸಿರುವ ವೆಂಕಪ್ಪ ಶೆಟ್ಟಿ ಮೂಡುಮನೆ, ಶ್ರೀಮತಿ ಸುಮತಿ ದೇವಾಡಿಗ ಇವರನ್ನು  ಸನ್ಮಾನಿಸಲಾಯಿತು.
 ಈ ಸಂದರ್ಭದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕರಾದ  ವೆಂಕಟರಮಣ  ಅಸ್ರಣ್ಣ ಆಶೀರ್ವದಿಸಿದರು.ತೋಕೂರು  ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ ಎಸ್ ಪೂಜಾರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಸವಿತಾ ಶರತ್ ಬೆಳ್ಳಾಯರು, ಅಶೋಕ್ ಕುಂದರ್, ಪುರುಷೋತ್ತಮ ಕೋಟ್ಯಾನ್, ಸಂಪತ್ ಶೆಟ್ಟಿ ತೋಕೂರು ಗುತ್ತು, ಮಾಜಿ ಅಧ್ಯಕ್ಷ  ಹರಿದಾಸ್ ಭಟ್, ಯುವಕ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ, ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್  ನ ಅಧ್ಯಕ್ಷ ದೀಪಕ್ ಸುವರ್ಣ, ಗಜಾನನ ಸ್ಪೋರ್ಟ್ಸ್ ಕ್ಲಬ್ಬಿನ ನವೀನ್ ಶೆಟ್ಟಿಗಾರ್, ಪತ್ರಕರ್ತರಾದ ರಮೇಶ್ ಅಮೀನ್ ಮುಂಬೈ, ಗಣೇಶ್ ದೇವಾಡಿಗ ಪಂಜ, ಯಕ್ಷ ಕಲಾರಂಗದ  ಭಾಸ್ಕರ್ ದೇವಾಡಿಗ, ಹಿಮಕರ್ ಕೋಟ್ಯಾನ್, ಗಣೇಶ್ ಪೂಜಾರಿ ತೋಕೂರು, ಸಂತೋಷ್ ಕುಮಾರ್, ಶಿವ ದೇವಾಡಿಗ, ಸಂಪತ್ ದೇವಾಡಿಗ, ಅಕ್ಷಯ್ ಭಂಡಾರಿ, ಸೋಮನಾಥ ಈ ಸಂದರ್ಭ ಉಪಸ್ಥಿತರಿದ್ದರು. ಸಂತೋಷ್ ದೇವಾಡಿಗ ಸ್ವಾಗತಿಸಿ, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article