ಪಲ್ಟಿಯಾದ ಆಟೋ,ಚಾಲಕನಿಗೆ ಗಂಭೀರ ಗಾಯ
Wednesday, January 1, 2025
ಕಿನ್ನಿಗೋಳಿ :ರಸ್ತೆಗೆ ಅಡ್ಡಬಂದ ನಾಯಿಯೊಂದನ್ನು ತಪ್ಪಿಸಲು ಹೋಗಿ ಆಟೋ ವೊಂದು ಮಗುಚಿಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿಯ ಕಾಪಿಕಾಡು ಸಮೀಪ ಬುಧವಾರದಂದು ನಡೆದಿದೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಕಟೀಲು ಮಲ್ಲಿಗೆಯಂಗಡಿ ನಿವಾಸಿ ಆನಂದ್ (40)ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಆಟೋ ಗೆ ಕಿನ್ನಿಗೋಳಿ ಕಾಪಿಕಾಡ್ ನ ಮೆನ್ನಬೆಟ್ಟು ಹಾಲು ಉತ್ಪಾದಕರ ಸಂಘದ ಬಳಿ ರಸ್ತೆಗೆ ಒಮ್ಮೇಲೆ ಬಂದ ನಾಯಿಯೊಂದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ಪೊದೆಯೊಳಗೆ ಮಗುಚಿ ಬಿದ್ದಿದೆ.ಮಗುಚಿಬಿದ್ದ ರಭಸಕ್ಕೆ ಆಟೋ ಜಖಂ ಗೊಂಡಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.