ಬಜಪೆ ವ್ಯವಸಾಯ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಡೆನ್ನಿಸ್ ಡಿ ಸೋಜಾ ಅವಿರೋಧ ಆಯ್ಕೆ
Monday, January 6, 2025
ಬಜಪೆ:ಸಹಕಾರ ರಂಗದ ಪ್ರತಿಷ್ಠಿತ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ನಿ ) ಬಜಪೆ ಇದರ ನೂತನ ಅಧ್ಯಕ್ಷರಾಗಿ ಡೆನ್ನಿಸ್ ಡಿ ಸೋಜಾ ಹಾಗೂ ಉಪಾಧ್ಯಕ್ಷರಾಗಿ ಭಾಸ್ಕರ್ ಮಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಡಾ ಎಂ ಏನ್ ರಾಜೇಂದ್ರಕುಮಾರ್, ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು, ರಿತೇಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಸ್ಟೇನಿ ಡಿ ಸೋಜಾ, ವಸಂತ, ಮಹಮ್ಮದ್ ಶರೀಫ್, ಶ್ರೀಮತಿ ಗೀತಾ ಅಮೀನ್, ಶ್ರೀಮತಿ ಸವಿತಾ, ಶ್ರೀಮತಿ ಮೀರಾ, ಹಾಗೂ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿ ಎನ್. ಜೆ. ಗೋಪಾಲ್ ಅವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ ಕೊಟ್ಟರು.