-->


ಚಾಮುಂಡಿ ಆರೂಢ ಗುಳಿಗ ದೈವದ ನೂತನ ಕಟ್ಟೆ ನಿರ್ಮಾಣಕ್ಕೆ  ಶಿಲಾನ್ಯಾಸ ಕಾರ್ಯಕ್ರಮ

ಚಾಮುಂಡಿ ಆರೂಢ ಗುಳಿಗ ದೈವದ ನೂತನ ಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಕೈಕಂಬ :ಮಂಗಳೂರು ತಾಲೂಕಿನ ಮುತ್ತೂರಿನ ಶ್ರೀ ಚಾಮುಂಡಿ ಗುಳಿಗ ಕ್ಷೇತ್ರ ಸೇವಾ ಸಮಿತಿ ಕುಂಟಲ್ ದಡಿ ಮಟ್ಟ್ ದ ಗುಡ್ಡೆಇದರ ನೇತೃತ್ವದಲ್ಲಿ ಇಲ್ಲಿನ ಚಾಮುಂಡಿ ಆರೂಢ ಗುಳಿಗ ದೈವದ ನೂತನ ಕಟ್ಟೆ ನಿರ್ಮಾಣಕ್ಕೆ  ಶಿಲಾನ್ಯಾಸ ಕಾರ್ಯಕ್ರಮ ಐ ಕೃಷ್ಣ ಆಸ್ರಣ್ಣ ಇವರ ನೇತೃತ್ವದಲ್ಲಿ  ಗುರುವಾರ  ಪೂರ್ವಾಹ್ನ 11.30ರ ಕುಂಭ ಲಗ್ನ ಮುಹೂರ್ತದಲ್ಲಿ   ನೆರವೇರಿತು. 
ಅಂದಾಜು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾನಿಧ್ಯ ಶಕ್ತಿ ಚಾಮುಂಡಿ ಅರೂಢ ಗುಳಿಗ ದೈವದ ಕಟ್ಟೆ, ಮೇಲ್ಛವಾಣಿ, ನೆಲ ಹಾಸು ಮತ್ತು ಆವರಣಗೋಡೆ ಸಹಿತ ಕ್ಷೇತ್ರದ ಸಂಪೂರ್ಣ ಜೀರ್ಣೋದ್ದಾರ ನಡೆಯಲಿದೆ. ಕೃಷ್ಣ ಅಸ್ರಣ್ಣ ಮತ್ತು ಪುರೋಹಿತ ವರ್ಗ ಶಿಲಾನ್ಯಾಸದ ವೈದಿಕ ವಿಧಿಗಳನ್ನು ನೆರವೇರಿಸಿದರು.

 ಕ್ಷೇತ್ರ ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಚಂದ್ರಹಾಸ್ ಶೆಟ್ಟಿ ಮೇಗಿನಮನೆ, ಧರ್ಣಪ್ಪ ಮೂಲ್ಯ ಮುತ್ತೂರು, ಸಮಿತಿ ಅಧ್ಯಕ್ಷ ಹರಿಯಪ್ಪ ಮುತ್ತೂರು, ಕಾರ್ಯಾಧ್ಯಕ್ಷ ಕುಸುಮಾಕರ ಪೂಜಾರಿ, ಉಪಾಧ್ಯಕ್ಷ ಚಂದ್ರಹಾಸ್ ಕುಲಾಲ್ ಮುತ್ತೂರು, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷೆ  ಸುಶ್ಮಾ ಸಂತೋಷ್, ಸದಸ್ಯರುಗಳಾದ ಸತೀಶ್ ಪೂಜಾರಿ ಬಳ್ಳಾಜೆ, ಜಗದೀಶ್ ದುರ್ಗಾಕೋಡಿ, ಗುತ್ತಿಗೆದಾರ ಪಾಂಚಜನ್ಯ ಕನ್ಷ್ಟ್ರಕ್ಷನ್ ನ  ಮಾಲೀಕರಾದ ದೇವಿ ಪ್ರಸಾದ್ ಭಟ್, ,ಸೇವಾ ಸಮಿತಿಯ ಗೌರವ ಸಲಹೆಗಾರರಾದ ರಾಮ ಪೂಜಾರಿ, ತಾರನಾಥ್ ಕುಲಾಲ್, ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಣ್, ಕೋಶಾಧಿಕಾರಿ ಯಾದವ ಶೆಟ್ಟಿ, ಗಣ್ಯರಾದ ಅಣ್ಣಿ ಶೆಟ್ಟಿ ಮುತ್ತೂರು ತಾಳಿಪಾಡಿ,  ಉದ್ಯಮಿ ಭಾಸ್ಕರ್ ಕಿಲಾಡಿ ಮೊಗರು , ಮಂಗಳೂರು ಹಿಂದೂ ಜಾಗರಣ ವೇದಿಕೆಯ ಮುಖಂಡ  ಹರೀಶ್ ಮಟ್ಟಿ,ಸಮಿತಿ ಸದಸ್ಯರುಗಳು ಹಾಗೂ ಊರ  ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article