-->


ಇಂದು ಕೈಕಂಬದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರಕಲಾ ಕೇಂದ್ರದ ವಾರ್ಷಿಕ `ತಕಧಿಮಿ-24'

ಇಂದು ಕೈಕಂಬದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರಕಲಾ ಕೇಂದ್ರದ ವಾರ್ಷಿಕ `ತಕಧಿಮಿ-24'

 


ಕೈಕಂಬ  : ಗುರುಪುರ ಕೈಕಂಬದ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡ ಇದರ 5ನೇ ವರ್ಷದ `ತಕಧಿಮಿ-2024' ಕಾರ್ಯಕ್ರಮವು ಕೈಕಂಬದ ಶ್ರೀ ಸುಬ್ರಹ್ಮಣ್ಯ ಕಲಾ ಆಟ್ರ್ಸ್ ಆಶ್ರಯದಲ್ಲಿ ಇಂದು(ಡಿ. 7) ಮಧ್ಯಾಹ್ನ 3ರಿಂದ 12 ಗಂಟೆ ರಾತ್ರಿಯವರೆಗೆ ಕೈಕಂಬ ಜಂಕ್ಷನ್‍ನಲ್ಲಿ ನಡೆಯಲಿದೆ.

ಮಧ್ಯಾಹ್ನ 3ರಿಂದ 4:30ರವರೆಗೆ ತಂಡದ ಭಾಗವತ ದಯಾನಂದ ಕೋಡಿಕಲ್ ಮತ್ತು ಹಿಮ್ಮೇಳ ವಾದಕ ಜಯರಾಮ ಚೇಳ್ಯಾರು ನೇತೃತ್ವದಲ್ಲಿ ಶಿಷ್ಯ ವೃಂದದಿಂದ `ಯಕ್ಷಗಾನಾರ್ಚನೆ' ಜರುಗಲಿದೆ. ಬಳಿಕ ತಕಧಿಮಿ ಸಂಸ್ಥೆಯ ನಾದಪ್ರಿಯ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಂಜೆ 5:45ರಿಂದ ರಕ್ಷಿತ್ ಪಡ್ರೆ ನಿರ್ದೇಶನದಲ್ಲಿ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ `ದಾಶರಥಿ ದರ್ಶನ' ಯಕ್ಷಗಾನ(ಯಜ್ಞ ಸಂರಕ್ಷಣೆ, ಜಟಾಯು ಮೋಕ್ಷ, ಸೀತಾ ಕಲ್ಯಾಣ, ಇಂದ್ರಜಿತು ಕಾಳಗ, ರಾವಣ ವಧೆ, ರಾಮ ಕಾರುಣ್ಯ) ಪ್ರದರ್ಶನಗೊಳ್ಳಲಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article