ಸಾಹಿತಿ ಗಣೇಶ ಕೊಲೆಕಾಡಿಯವರಿಗೆ ಸಹಕಾರ ನೀಡಿ
Saturday, December 14, 2024
ಮೂಲ್ಕಿ : ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿದ್ವಾಂಸ ಗಣೇಶ ಕೊಲೆಕಾಡಿಯರ(9482130381)
ಆರೋಗ್ಯ ಚಿಕಿತ್ಸೆಗೆ ಸಹಕಾರ ನೀಡುವುದಕ್ಕಾಗಿ ಆರ್ಥಿಕವಾಗಿ ಸ್ಪಂದಿಸುವ ಕೆಲಸ ಇನ್ನಷ್ಟು ಆಗಬೇಕಾಗಿದೆ. ಸಾಹಿತ್ಯಾಭಿಮಾನಿಗಳು ಈ ನಿಟ್ಟಿನಲ್ಲಿ ಸ್ಪಂದಿಸಬೇಕು ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದರು.
ಅವರು ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಸಾಹಿತಿ ಗಣೇಶ ಕೊಲಕಾಡಿಯವರ ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಿ ಮಾತನಾಡಿದರು.
ವಿದ್ವಾಂಸ ಗಣೇಶರು ಯಕ್ಷಗಾನಕ್ಕೆ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಅವರ ಪ್ರಸಂಗಗಳು, ಸಾಹಿತ್ಯ, ಛಂದಸ್ಸು ಕ್ಷೇತ್ರದಲ್ಲಿ ಮಾಡಿದ ಕೆಲಸಗಳು ಗಮನೀಯವಾದುದು. ಇಂತಹ ಸಾಹಿತಿಯ ಕಷ್ಟದ ಕಾಲದಲ್ಲಿ ಸಾಹಿತ್ಯಾಭಿಮಾನಿಗಳು ಜೊತೆಗಿರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಮೂಲ್ಕಿ ಕಸಾಪದ ಮಿಥುನ ಕೊಡೆತ್ತೂರು, ಮಾಧವ ಕೆರೆಕಾಡು, ಸಚ್ಚಿದಾನಂದ ಉಡುಪ, ಕೃಷ್ಣರಾಜ ಭಟ್, ವಿನ್ಸೆಂಟ್, ಉದಯ ಪೂಂಜ ಮತ್ತಿತರರಿದ್ದರು.