ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮುಲ್ಕಿ ತಾಲೂಕು ಘಟಕ, ಮುಲ್ಕಿ ಹೋಬಳಿ ಘಟಕದ ಅಧಿಕಾರಿಗಳ ಪದ ಸ್ವೀಕಾರ ಸಮಾರಂಭ
Saturday, December 14, 2024
ಕಿನ್ನಿಗೋಳಿ:ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮುಲ್ಕಿ ತಾಲೂಕು ಘಟಕ, ಮುಲ್ಕಿ ಹೋಬಳಿ ಘಟಕದ ಅಧಿಕಾರಿಗಳ ಪದ ಸ್ವೀಕಾರ ಸಮಾರಂಭವು ಕಿನ್ನಿಗೋಳಿಯ ನೇಕಾರಸೌಧ ಸಭಾಭವನದಲ್ಲಿ ಶನಿವಾರದಂದು ನಡೆಯಿತು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ರೆ.ಫಾ.ಜೋಕಿಂ ಫೆರ್ನಾಂಡಿಸ್ ದೀಪ ಬೆಳಗಿಸಿ ಶುಭಾಶಂಸನೆಗೈದರು.
ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಇದರ ಮಾಜಿ ಅಧ್ಯಕ್ಷ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಧನಂಜಯ ಶೆಟ್ಟಿಗಾರ್,ದಾಯ್ಜಿವಾಲ್ಡ್ ಟಿವಿ ಯ ನಿರ್ದೇಶಕ ಹೇಮಾಚಾರ್ಯ,ಐಕಳ ಪೊಂಪೈ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಕೆ.ವಿ ,ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು ,ಕ.ಸಾ.ಪ ಮುಲ್ಕಿ ಹೋಬಳಿ ಘಟಕ, ಮುಲ್ಕಿ ತಾಲೂಕು ಕ.ಸಾ.ಪ ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ಮುಲ್ಕಿ ಹೋಬಳಿ ಘಟಕದ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.
ಅದ್ಯಕ್ಷರಾಗಿ ಜೊಸ್ಸಿ ಪಿಂಟೋ,ಗೌರವ ಕೋಶಾಧ್ಯಕ್ಷರಾಗಿ ಅನಿಲ್ ಸಾಲ್ಯಾನ್,ಗೌರವ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ,ಸಂಘಟನಾ ಕಾರ್ಯದರ್ಶಿಯಾಗಿ ಸ್ಟೇನಿ ಪಿಂಟೋ, ಸದಸ್ಯರಾಗಿ ಪ್ರಮೋದ್ ಕುಮಾರ್,ಶಂಕರ್ ಮಾಸ್ಟರ್ ಗೋಳಿಜಾರ,ಹೃದಯ ಕವಿ ಮನ್ಸೂರ್ ಮುಲ್ಕಿ, ಅಂಬಿಕಾ ಪ್ರತಾಪ್ ಶೆಟ್ಟಿ,ಶಶಿಕಲಾ ಕೆಮ್ಮಡೆ, ಸಂತೋಷ್ ಶೆಟ್ಟಿ ಬಾಬಕೋಡಿ,ಟಿ.ಕೆ ಅಬ್ದುಲ್ ಖಾದರ್ ಗುತ್ತಕಾಡು, ಡಾ.ಪುರುಷೋತ್ತಮ ಕೆ ವಿ, ಆಯ್ಕೆಯಾದರು.
ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಜೋಸ್ಸಿ ಪಿಂಟೋ ಸ್ವಾಗತಿಸಿ ವಂದಿಸಿದರು.