ಮುಲ್ಕಿ: ಡಿ. 29- ಗೇರುಕಟ್ಟೆ ಮುಂಡಾಳ ಸಮಾಜದ ವತಿಯಿಂದ ವಧೂವರರ ಅನ್ವೇಷಣಾ ಕಾರ್ಯಕ್ರಮ
Saturday, December 7, 2024
ಮುಲ್ಕಿ: ಗೇರುಕಟ್ಟೆ ಮುಂಡಾಳ (ಎಸ್ ಸಿ) ಶಿವ ಸಮಾಜ ಸಂಘವು ಒಂಬತ್ತು ಮಾಗಣೆಯ 42 ಗ್ರಾಮಗಳ ಸಂಘವಾಗಿದ್ದು ಸಾಮಾಜಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.
ಡಿಸೆಂಬರ್ 29ರಂದು ಭಾನುವಾರ ಸಂಘದಲ್ಲಿ ವಧೂವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ ಸಚ್ಚಿದಾನಂದ ಮುಲ್ಕಿ ಗೇರುಕಟ್ಟೆ ಮುಂಡಾಲ ಸಮಾಜದ ಸಭಾಭವನದಲ್ಲಿ ನಡೆದ ಪತ್ರಿಗಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅವರು ಮಾತನಾಡಿ ಕಳೆದ 2018 ರಂದು ವಧೂ ವರರ ಅನ್ವೇಷಣಾ ಕಾರ್ಯಕ್ರಮ ಏರ್ಪಡಿಸಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನದಿಂದ ನೂರಾರು ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುತ್ತದೆ
ಡಿಸೆಂಬರ್ 29 ರಂದು ವಧೂವರರ ಅನ್ವೇಷಣಾ ಕಾರ್ಯಕ್ರಮಕ್ಕೆ ಬರುವ ಆಸಕ್ತರು ಆಧಾರ್ ಕಾರ್ಡ್ ಪಡಿತರ ಚೀಟಿ ಜಾತಿ ಪ್ರಮಾಣ ಪತ್ರ ಪ್ರತಿ ಮತ್ತು ಪೂರ್ಣ ಪ್ರಮಾಣದ ಭಾವಚಿತ್ರ ನೀಡಿ ನೋಂದಾಯಿಸಬೇಕು
ಕಾರ್ಯಕ್ರಮದ ಬಳಿಕ ಪ್ರತಿ ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮದ ಮಾಹಿತಿಗಾಗಿ ಸಂಘದ ಕಚೇರಿ ತೆರೆದಿರುತ್ತದೆ
ಮುಂಡಾಳ ಸಮಾಜದ ಹೆಚ್ಚಿನ ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ 733 816 15 89, 966 37 60 630 ಮೊಬೈಲ್ ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಾಜೀ ಅಧ್ಯಕ್ಷ ಭಾಸ್ಕರ ಮಾಬಿಯಾನ್, ಮಾಜೀ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಬಿ, ಸದಸ್ಯರಾದ ಶಯನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.