ನಾರಾಯಣಗುರುಗಳು ಒಂದು ಸಮುದಾಯಕ್ಕೆ ಮೀಸಲಾಗಿಲ್ಲ : ಉಮಾನಾಥ ಕೋಟ್ಯಾನ್
Friday, December 27, 2024
ಕಟೀಲು :ನಾರಾಯಣಗುರುಗಳು ಒಂದು ಸಮುದಾಯಕ್ಕೆ ಮೀಸಲಾಗಿಲ್ಲ, ಜಗತ್ತಿಗೆ ಒಳತನ್ನು ಬಯಸಿದ ಲೋಕದಸಂತರಾಗಿದ್ದಾರೆ. ಅವರ ದೂರದೃಷ್ಟಿತ್ವದ ಫಲಾನುಭವಿಗಳಾಗಿದ್ದಾರೆ
ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಟೀಲು ಬಿಲ್ಲವ ಸಮಾಜ ಸೇವಾ ಸಂಘ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ತುಳುನಾಡ ಜನರು ಬ್ರಹ್ಮಶ್ರೀ ನಾರಾಯಣಗುರುಗಳ ಶಿಕ್ಷಣ ಕ್ರಾಂತಿ ನಡೆಸಿದರ ಪರಿಣಾಮ ಜಿಲ್ಲೆಯಲ್ಲಿ ಸುಶೀಕ್ಷಿತ ಸಮಾಜ ನಿರ್ಮಾಣವಾಗಿದೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತಗಳೊಂದಿಗೆ ಹಿಂದೂ ಸಂಸ್ಕೃತಿಯ ಜಾಗೃತಿಯ ಕೇಂದ್ರವಾಗಲಿ ಎಂದರು.
ಪಕ್ಷಿಕೆರೆ ಶ್ರೀ ಕೋರ್ದಬ್ಬು ದೈವಸ್ಥಾನ ಆಡಳಿತ ಮೊಕ್ತೇಸರ ಶೀನ ಸ್ವಾಮಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಧಾರ್ಮಿಕ ಚಿಂತಕ ಮಹೇಶ್ ಶಾಂತಿ, ಕುದ್ರೋಳಿ ಕ್ಷೇತ್ರದ ಎಚ್.ಎಸ್. ಸಾಯಿರಾಮ್, ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷೆ ಕಸ್ತೂರಿ ಪಂಜ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ, ಉದ್ಯಮಿ ಎ. ಸೀತಾರಾಮ್, ಪದಾಧಿಕಾರಿಗಳಾದ ಈಶ್ವರ ಕಟೀಲು, ಗೋಪಾಲ ಸಾಲ್ಯಾನ್, ಲೋಕಯ್ಯ ಸಾಲ್ಯಾನ್, ಶೇಖರ ಪೂಜಾರಿ, ನೀಲಯ್ಯ ಕೋಟ್ಯಾನ್, ತಿಮ್ಮಪ್ಪ ಕೋಟ್ಯಾನ್, ಬಾಲಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ದಯಾನಂದ ಕಟೀಲು ಸ್ವಾಗತಿಸಿದರು, ರಾಜೇಂದ್ರಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ನಂತರ ಥಂಡರ್ ಗೈಸ್ ಬಜಪೆ ಇವರಿಂದ ಸ್ಥಳ ಪುರಾಣ, ಹಾಗೂ ಕಲಾಕುಂಭ ಕುಳಾಯಿ ತಂಡದಿಂದ ಪರಮಾತ್ಮೆ ಪಂಜುರ್ಲಿ ತುಳು ನಾಟಕ ಪ್ರದರ್ಶನಗೊಂಡಿತು.