ಮಕ್ಕಳ ಪಂಚಾಯತ್ ಅರಿವಿನ ಹಬ್ಬ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಕೃಷಿ ಮಾಹಿತಿ ಕಾರ್ಯಕ್ರಮ
Thursday, November 21, 2024
ಬಜಪೆ:ಎಕ್ಕಾರು ಗ್ರಾಮ ಪಂಚಾಯತ್ ಮತ್ತು ಅರಿವು ಕೇಂದ್ರ ಎಕ್ಕಾರು ಮಂಗಳೂರು ತಾಲೂಕು ಸಹಯೋಗದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ
ಮಕ್ಕಳ ಪಂಚಾಯತ್ ಅರಿವಿನ ಹಬ್ಬದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಗೋಶಾಲೆ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋನಾಲ್ಡ್ ಫೆರ್ನಾಂಡಿಸ್ ಎಕ್ಕಾರು ಇವರ ತೋಟದಲ್ಲಿ ದ.ಕ ಜಿ.ಪಂ ಹಿ.ಪ್ರಾ ಶಾಲೆ ಮತ್ತು ಬಡಗ ಎಕ್ಕಾರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಅಧ್ಯಯನ ಪ್ರವಾಸ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಎಕ್ಕಾರು ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ, ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರು ಅಧ್ಯಕ್ಷ ಶೇಖರ್ ಶೆಟ್ಟಿ,
ಎಕ್ಕಾರು ಗ್ರಂಥಾಲಯ ಮೇಲ್ವಿಚಾರಕಿ ಹೇಮಲತಾ ಶರ್ಮ,
ಲಯನ್ಸ್ ಕ್ಲಬ್ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ, ಕಾಟಿಪಳ್ಳ ಕೃಷ್ಣಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೀಪಕ್ ಪೆರ್ಮುದೆ, ದ . ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಶ್ಮಿತಾ, ಪಂಚಾಯತ್ ಸಿಬ್ಬಂದಿಗಳಾದ ಸವಿತಾ ,ಆಶೋಕ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.