ಕಟೀಲು:ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು , 'ಕೆರಿಯರ್ ಸ್ಪೆಕ್ಟ್ರಮ್ - 2024' ಕಾರ್ಯಕ್ರಮ
Thursday, November 21, 2024
ಕಟೀಲು:ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ಐಕ್ಯೂಎಸಿ , ಹಳೆವಿದ್ಯಾರ್ಥಿ ಸಂಘ ಹಾಗೂ ಕ್ಯಾಪ್ಸ್ ಎಜುಕೇಷನ್ ಟು ಪ್ರೊಪೆಸ್ (ಸಿಎ ಶಿಕ್ಷಣಕ್ಕಾಗಿ ಪ್ರವರ್ತಕ ಸಂಸ್ಥೆ) ಇವುಗಳ ಜಂಟಿ ಆಯೋಜನೆಯಲ್ಲಿ
'ಕೆರಿಯರ್ ಸ್ಪೆಕ್ಟ್ರಮ್ - 2024'
ದ್ವಿತೀಯ ಪಿಯುಸಿ ನಂತರ ಮುಂದೇನು? ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ , ಅಂತರ್ ಪದವಿಪೂರ್ವ ಕಾಲೇಜು ರಸಪ್ರಶ್ನೆ ಸ್ಪರ್ಧೆ ಮತ್ತು ಜಾನಪದ ಸಮೂಹ ಗೀತೆ ಸ್ಪರ್ಧೆಯು ನ. 15 ರ ಶುಕ್ರವಾರದಂದು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ್.ವಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಟೀಲು ದೇವಳದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಅವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಯಾಪ್ಸ್ ಪೌಂಡೇಶನ್ ನ ಸಂಸ್ಥಾಪಕ ಸಿ.ಎ ಚಂದ್ರಶೇಖರ್ ಶೆಟ್ಟಿಅವರು ದ್ವಿತೀಯ ಪಿ.ಯು.ಸಿ ನಂತರ ಮುಂದೇನು? ಎಂಬ ವಿಷಯದಲ್ಲಿ ವಾಣಿಜ್ಯ ವಿಷಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ರಸ ಪ್ರಶ್ನಾ ಸ್ಪರ್ಧೆಯನ್ನು ಯೇನಪೋಯಾ ವಿಶ್ವವಿದ್ಯಾಲಯದ ಪ್ರೊ.ಸಾಜನ್.ಎಂ. ನಡೆಸಿಕೊಟ್ಟರು. ಜಾನಪದ ಸಮೂಹ ಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಹರೀಶ್ ಮಲ್ಲಾರ್ ಹಾಗೂ ಮನ್ಸೂನ್ ರಾಜ್ ನಡೆಸಿಕೊಟ್ಟರು.ದ್ವಿತೀಯ ಪಿಯುಸಿ ನಂತರ ಅರಿವು ಕಾರ್ಯಕ್ರಮ ಮತ್ತು ರಸ ಪ್ರಶ್ನೆ ಮತ್ತು ಜಾನಪದ ಸಮೂಹ ಗೀತೆ ಸ್ಪರ್ಧೆಗಳಿಗೆ ಮುಲ್ಕಿ ಮತ್ತು ಮೂಡಬಿದಿರೆ ವಲಯದ ಒಟ್ಟು ಎಂಟು ಪದವಿಪೂರ್ವ ಕಾಲೇಜಿನ ಇನ್ನೂರ ಅರವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಮಟ್ಟಿ, ಬ್ಯಾಂಕ್ ಆಫ್ ಬರೋಡಾ(ಬಿ.ಒ.ಬಿ) ಕಟೀಲು ಶಾಖೆಯ ಹಿರಿಯ ಮ್ಯಾನೇಜರ್ ಗಿರೀಶ್.ಎಂ. ಪಾಟೀಲ್
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಸಪ್ರಶ್ನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪೊಂಪೈ ಪಿ.ಯು ಕಾಲೇಜು ಐಕಳ, ದ್ವಿತೀಯ ಸ್ಥಾನವನ್ನು ಗೋವಿಂದದಾಸ ಪಿಯುಸಿ ಕಾಲೇಜು ,
ವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಜಾನಪದ ಸಮೂಹ ಗೀತೆ ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನವನ್ನುವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು,ದ್ವಿತೀಯ ಸ್ಥಾನವನ್ನು ಸಂತ ಜೋಸೆಫ್ ಪಿಯು ಕಾಲೇಜು ಬಜಪೆ, ತೃತೀಯ ಸ್ಥಾನ ಸರಕಾರಿ ಪದವಿಪೂರ್ವ ಕಾಲೇಜು ಮುಲ್ಕಿ ತಂಡಗಳು ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದ ನಿರ್ವಹಣೆಯನ್ನು ಸಂಸ್ಕೃತ ಉಪನ್ಯಾಸಕ ಡಾ।ಪದ್ಮನಾಭ ಮರಾಠೆ ಹಾಗೂ ಇಂಗ್ಲೀಷ್ ಭಾಷಾ ಉಪನ್ಯಾಸಕಿ ಶ್ರೀಮತಿ ಲತಾಶ್ರಿ , ಉಪನ್ಯಾಸಕಿ ಕು। ರೇಷ್ಮಾ ರೈ.ಬಿ. ವಂದಿಸಿದರು .ಗ್ರಂಥಪಾಲಕಿ ಶ್ರೀಮತಿ ಸುಮಿತ್ರಾ ಬಹುಮಾನ ಪಟ್ಟಿ ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿಗಳಾದ ಶ್ರೀವತ್ಸಾ ,ಸುಹಾಸ್ ರಾವ್ ನಡೆಸಿಕೊಟ್ಟರು. ಐಕ್ಯೂಎಸಿ ಮತ್ತು ಹೆಚ್.ಆರ್.ಡಿ .ಮುಖ್ಯಸ್ಥ, ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್.ಹಾವಂಜೆಯವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ವಿವಿಧ ಸಮಿತಿಗಳಲ್ಲಿ ಸ್ವಯಂಸೇವಕರಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ರೀತಿಯಲ್ಲಿ ಸಹಕರಿಸಿದರು.
ಬೋಧಕ ಸಿಬ್ಬಂದಿಗಳಾದ ಡಾ.ಪದ್ಮನಾಭ ಮರಾಠೆ, ಡಾ.ನಾಗರಾಜ್ , ದೈ.ಶಿ.ನಿರ್ದೇಶಕ ಅಶ್ವತ್ಥ್ , ಶ್ರೀಮತಿ ಮಾಲತಿ ,ಉಪನ್ಯಾಸಕಿಯರಾದ ಕು।ಹರಿಣಾಕ್ಷಿ ,ಕು।ಅನನ್ಯ ಶ್ರೀಮತಿ ರಶ್ಮಿಕುಮಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕು. ಶಶಾಂಕ್,ಕು.ಅದಿತ್ ಶೆಟ್ಟಿ ,ಕು.ಮನೀಶ್, ಕು. ತ್ರಿಷಾ ಶೆಟ್ಟಿ ಕಾರ್ಯಕ್ರಮದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿದರು.ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.