ಹಳೆಯಂಗಡಿ ಉಪ ಚುನಾವಣೆ : ಸ್ಥಾನ ಉಳಿಸಿಕೊಂಡ ಕಾಂಗ್ರೆಸ್
Tuesday, November 26, 2024
ಮೂಲ್ಕಿ :ಮೂಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತಿನ ಒಂದನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತೆ ಸುಚಿತ್ರ ಪ್ರಸನ್ನ ಕುಮಾರ್ ಭರ್ಜರಿ ಜಯಗಳಿಸಿದ್ದಾರೆ.
ಚಲಾವಣೆಗೊಂಡ 555 ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತೆ ಸುಚಿತ್ರ ಪ್ರಸನ್ನ ಕುಮಾರ್ 360 ಮತಗಳನ್ನು ಪಡೆದು ಬಿಜೆಪಿ ಬೆಂಬಲಿತೆ ಸುಂದರಿ ಸದಾಶಿವ 188 ಮತಗಳನ್ನು ಪಡೆದಿದ್ದಾರೆ. 8 ಮತಗಳು ಅರಸಿಂದುಗೊಂಡಿದೆ.
ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಮತ್ತಿತರರು ಅಭಿನಂದಿಸಿದ್ದಾರೆ.