ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂಲ್ಕಿಯ ಪಾಯಲ್ ಅವರಿಗೆ ಅವಳಿ ಚಿನ್ನದ ಪದಕ
Monday, November 18, 2024
ಮೂಲ್ಕಿ : ಮೂಲ್ಕಿ ಕೆ.ಎಸ್.ರಾವ್ ನಗರದ ಪಾಯಲ್ ಪಿ. ಅವರು ಉಡುಪಿಯ ಬುಡಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ಮಾಧವಂಗಣದಲ್ಲಿ ನ.17 ರಂದು ಜರುಗಿದ ಉಡುಪಿ ಓಪನ್ ಕರಾಟೆ ಚ್ಯಾಂಪಿಯನ್ ಶಿಪ್ 2024ರ ಸ್ಪರ್ಧೆಯ 12ರ ಹರೆಯದ ಹಳದಿ ಬೆಲ್ಟ್‌ನ ವೈಯಕ್ತಿಕ ವಿಭಾಗದ ಕುಮುಟಿಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ಪ್ರಥಮ ಸ್ಥಾನ ಪಡೆದು ಅವಳಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಇವರು ಮೂಲ್ಕಿ ಕೆ.ಎಸ್.ರಾವ್ ನಗರದ ನಿವೃತ್ತ ಯೋಧ ಪ್ರಶಾಂತ್ ಬಿ. ಮತ್ತು ನಯನ ಪಡುಬಿದ್ರಿ ದಂಪತಿಯ ಪುತ್ರಿಯಾಗಿದ್ದು, ಪಾವಂಜೆ ಶ್ರೀ ವಾಣಿ ಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿ, ಎಸ್.ಕೋಡಿಯ ಕರಾಟೆ ಶಿಕ್ಷಣ ಕೇಂದ್ರದ ಕರಾಟೆ ತರಬೇತುದಾರ ನಾಗರಾಜ್ ಕುಲಾಲ್ ಕುಬೆವೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.