-->


ಗಂಜಿಮಠ ವಲಯ ಮಟ್ಟದ `ಮಕ್ಕಳ ಸಪ್ತಾಹ' ಕಾರ್ಯಕ್ರಮ

ಗಂಜಿಮಠ ವಲಯ ಮಟ್ಟದ `ಮಕ್ಕಳ ಸಪ್ತಾಹ' ಕಾರ್ಯಕ್ರಮ

 


ಗುರುಪುರ : ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಗುರುಪುರ ಗ್ರಾಮ ಪಂಚಾಯತ್ ಇವುಗಳ ಜಂಟಿ ಸಹಯೋಗದಲ್ಲಿ ನ. 21ರಂದು ಗುರುಪುರ ಪಂಚಾಯತ್ ಸಭಾಂಗಣದಲ್ಲಿ ಗಂಜಿಮಠ ವಲಯ ಮಟ್ಟದ `ಮಕ್ಕಳ ಸಪ್ತಾಹ' ಕಾರ್ಯಕ್ರಮ ನಡೆಯಿತು.


ಪಂಚಾಯತ್ ಪಿಡಿಒ ಪಂಕಜಾ ಶೆಟ್ಟಿ ಹಾಗೂ ಮಕ್ಕಳ ಪೋಷಕರು ಜಂಟಿಯಾಗಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷೆ ಸಫರಾ ಎನ್. ಅವರು ಪ್ರಸ್ತಾವಿಕ ಮಾತನ್ನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಅವರು ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆಯ ಪ್ರಯೋಜನದ ಕುರಿತು ಪೋಷಕರಿಗೆ ಮನದಟ್ಟು ಮಾಡಿದರು.


ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಗಳಿಸಿರುವ ಪಂಚಾಯತ್ ಸದಸ್ಯೆ ಬಬಿತಾ ಅವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು.



ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಂಜಿಮಠ ವಲಯ ವ್ಯಾಪ್ತಿಯ ಒಟ್ಟು 30 ಅಂಗನವಾಡಿಗಳ ಪುಟಾಣಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಪಂಚಾಯತ್ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಸದಸ್ಯರಾದ ಯಶವಂತ ಶೆಟ್ಟಿ, ಬಬಿತಾ, ಶೋಭಾ, ಬುಶ್ರಾ, ಮರಿಯಮ್ಮ, ರೆಹನಾ, ನಳಿನಿ ಶೆಟ್ಟಿ, ಶಶಿಕಲಾ, ಛಾಯಾ, ಬಾಳಪ್ಪ, ರಾಜೇಶ್ ಸುವರ್ಣ ಹಾಗೂ ಮೂಳೂರು ಸಿಎಚ್‍ಒ ಬಸವರಾಜ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮೀ, ಮಕ್ಕಳು, ಪೋಷಕರು ನಾಗರಿಕರು ಪಾಲ್ಗೊಂಡಿದ್ದರು. ಅಂಗನವಾಡಿ ಶಿಕ್ಷಕಿಯರಾದ ರೂಪಾ ಸ್ವಾಗತಿಸಿದರೆ, ಚಂಚಲಾ ನಿರೂಪಿಸಿದರು. ಪವಿತ್ರಾ ಅವರು ವಂದಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article