-->


ರಂಗಭೂಮಿ ಎಂದರೆ ಒಂದು ಶಕ್ತಿ.  ಒಗ್ಗಟ್ಟು. ಧೈರ್ಯ  ಶಿಸ್ತನ್ನು ಹೇಳಿಕೊಡುವ ರಂಗಭೂಮಿ ನಮ್ಮನ್ನು ಬೆಳೆಸುತ್ತದೆ - ಗಿರಿಜಾ ಸಿದ್ದಿ

ರಂಗಭೂಮಿ ಎಂದರೆ ಒಂದು ಶಕ್ತಿ. ಒಗ್ಗಟ್ಟು. ಧೈರ್ಯ ಶಿಸ್ತನ್ನು ಹೇಳಿಕೊಡುವ ರಂಗಭೂಮಿ ನಮ್ಮನ್ನು ಬೆಳೆಸುತ್ತದೆ - ಗಿರಿಜಾ ಸಿದ್ದಿ

 


ಕಟೀಲು:  ಸೌತ್ ಆಫ್ರಿಕಾದಿಂದ ಬಂದವರು ಎನ್ನಲಾದ ಸಿದ್ದಿಗಳು ರಂಗಭೂಮಿಯಿಂದ ಕನ್ನಡ ಕಲಿಯುವಂತಾಯಿತು. ಕರ್ನಾಟಕ ಜನತೆ ಗುರುತಿಸುವಂತಾಯಿತು ಎಂದು ರಂಗಕರ್ಮಿ ಗಿರಿಜಾ ಸಿದ್ದಿ ಹೇಳಿದರು.ಅವರು ಕಟೀಲು ನುಡಿಹಬ್ಬದಲ್ಲಿ ರಂಗಭೂಮಿ ಬಗ್ಗೆ ಮಾತನಾಡಿದರು. 

ರಂಗಭೂಮಿ ಎಂದರೆ ಒಂದು ಶಕ್ತಿ.  ಒಗ್ಗಟ್ಟು. ಧೈರ್ಯ  ಶಿಸ್ತನ್ನು ಹೇಳಿಕೊಡುವ ರಂಗಭೂಮಿ ನಮ್ಮನ್ನು ಬೆಳೆಸುತ್ತದೆ. ಸಿದ್ದಿಗಳನ್ನು ಸೇರಿಸಿ ಮಾಡಿದ ಕಪ್ಪು ಜನ ಕೆಂಪು ನೆರಳು ನಾಟಕ ನೂರಾರು ಪ್ರದರ್ಶನಗಳನ್ನು ಕಂಡಿತು. ನಿನಾಸಂ ನಮ್ಮನ್ನು ಬೆಳೆಸಿತು. ಇಪ್ಪತ್ತೈದು ವರುಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾ ಬೇಗ ಯಶಸ್ಸು ಕೀರ್ತಿ ಕೊಡುತ್ತದೆ. ರಂಗಭೂಮಿ ಹಾಗಲ್ಲ. ಅಲ್ಲಿ ಕಷ್ಟ ಪಡುತ್ತಲೇ ಇರಬೇಕು. ಸಾಧನೆ ಮಾಡಬೇಕು. ಮಕ್ಕಳಿಗೆ ರಂಗಭೂಮಿ ಅಥವಾ ನಾಟಕಗಳಲ್ಲಿ ತೊಡಗಿಸಿಕೊಳ್ಳುವುದು ತುಂಬ ಅವಶ್ಯಕ ಎಂದು ಗಿರಿಜಾ ಸಿದ್ದಿ ಹೇಳಿದರು.
ಕಟೀಲು ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿಗಳಾದ ವಿಲ್ಸನ್ ಕಟೀಲು, ಮಾಲತಿ ಚರಣ್, ಸುದರ್ಶನ್ ಆಚಾರ್ಯ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article