'ಕೃಷ್ಣನ ಕನಸು'ಕಥಾ ಸಂಕಲನ ಬಿಡುಗಡೆ:
Friday, November 22, 2024
ಕಟೀಲು:ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಬಿಂದಿಯಾ ಕುಲಾಲ್ ಇವರ ಸಣ್ಣ ಕಥಾ ಸಂಕಲನವು ಭ್ರಮರ ಇಂಚರ ನುಡಿಹಬ್ಬ -2024 ರ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಚಿಂತಕ ,ಸಾಹಿತಿ ಶ್ರೀ ಲಕ್ಷ್ಮೀಶ ತೊಳ್ಪಾಡಿ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್ .ಹಾವಂಜೆ ಇವರು ಕೃತಿ ರಚನೆಗೆ ಮಾರ್ಗದರ್ಶನ ನೀಡಿದ್ದರು.ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಕಥಾ ಸಂಕಲನದ ಮುಖಪುಟ ವಿನ್ಯಾಸ ನಿರ್ಮಿಸಿಕೊಟ್ಟಿದ್ದರು.