ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿಯವರು ಕಟೀಲಿಗೆ ಭೇಟಿ
Wednesday, November 20, 2024
ಕಟೀಲು:ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿಯವರು ಮಂಗಳವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.ದೇವಳದ ರಥ ಬೀದಿಯ ಮುಖ್ಯ ಗೋಪುರದ ಸಮೀಪ ಸ್ವಾಮೀಜಿಯವರನ್ನು ಕಟೀಲಿನ ಆನೆ ಮಹಾಲಕ್ಷ್ಮೀ ವಿಶೇಷವಾಗಿ ಸ್ವಾಗತ ನೀಡಿತು.ದೇವಳದ ವತಿಯಿಂದ ಸ್ವಾಮೀಜಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅರ್ಚಕ ವೃಂದ ,ಆಡಳಿತ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದರು.