ಕಟೀಲಿನಲ್ಲಿ ನಾಮಸಂಕೀರ್ತನೋಪಾಸನಾ ಆರಂಭ
Saturday, November 2, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೀಪಾವಳಿಯಂದು ಆರಂಭಗೊಂಡು ಇಪ್ಪತ್ತನಾಲ್ಕು ದಿನಗಳ ಕಾಲ ಭಜನೆ ನಡೆಯಲಿದೆ. ತಾ. ೧೨ರಂದು ಕಾರ್ತಿಕ ಶುದ್ಧ ಏಕಾದಶಿಯಂದು ನಡೆಯುವ ಏಕಾಹ ಭಜನೆಯೊಂದಿಗೆ ತಾ. ೨೩ರಂದು ಭಜನಾ ಮಂಗಲೋತ್ಸವ ನಡೆಯಲಿದೆ. ದೇವಳದ ಸರಸ್ವತೀ ಸದನದಲ್ಲಿ ತಾ ಡಿಸೆಂಬರ್ ೧ರವರೆಗೆ ಒಂದು ತಿಂಗಳ ಕಾಲ ದಿನವಿಡೀ ವಿವಿಧ ಭಜನಾಮಂಡಳಿಗಳಿಂದ ನಡೆಯುವ ನಾಮಸಂಕೀರ್ತನೋಪಾಸನಾ ಕಾರ‍್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಒಂದು ತಿಂಗಳ ಕಾಲ ಬಳಿಗ್ಗೆ ೯.೩೦ರಿಂದ ಸಂಜೆ ೫ರತನಕ ವಿವಿಧ ಭಜನಾ ತಂಡಗಳಿಂದ ಎರಡು ಸಾವಿರಕ್ಕೂ ಮಿಕ್ಕಿದ ಭಕ್ತರಿಂದ ಭಜನೆ ನಡೆಯಲಿದೆ.