ಕಟೀಲು ದೇಗುಲದ ಗೋಶಾಲೆಯಲ್ಲಿ ಗೋಪೂಜೆ
Monday, November 4, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಾಂಜದಲ್ಲಿ ನಡೆಸುತ್ತಿರುವ ನಂದಿನೀ ಗೋಶಾಲೆಯಲ್ಲಿ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು.
ಶ್ರೀಹರಿನಾರಾಯದಾಸ ಆಸ್ರಣ್ಣ ಮಾತನಾಡಿ ನಾನಾ ತಳಿಗಳ ದೇಸೀ ದನಗಳನ್ನು ಇಲ್ಲಿ ನೋಡಿಕೊಳ್ಳಲಾಗುತ್ತಿದ್ದು, ದೇಗುಲವು ವಾರ್ಷಿಕ ರೂ. ೫೦ಲಕ್ಷಕ್ಕೂ ಮಿಕ್ಕಿ ಹಣವನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ. ಅನೇಕ ಭಕ್ತರೂ ಹುಲ್ಲು, ಹಿಂಡಿ ಹೀಗೆ ನಾನಾ ವಸ್ತುಗಳನ್ನು ನೀಡಿ ಸಹಕರಿಸುತ್ತಿದ್ದಾರೆ. ದೇವರಿಗೆ ಅಭಿಷೇಕ ಮಾಡಿದ ಸೀಯಾಳವನ್ನು ಪುಡಿ ಮಾಡಿ ಗೋವುಗಳಿಗೆ ನೀಡುವುದಕ್ಕಾಗಿ ಒಂದು ಯಂತ್ರವನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.
ಬೆಳ್ತಂಗಡಿ ವಿಹಿಂಪ ಮುಖಂಡರಾದ ಡಾ. ದಯಾಕರ್ ಮಾತನಾಡಿ, ಗೋಶಾಲೆ ನಡೆಸುವುದು ಕಷ್ಟದ ಕೆಲಸ. ಆದರೂ ಹಿಂದುಗಳ ಸಹಕಾರದಿಂದ ವಿಶ್ವಹಿಂದೂ ಪರಿಷತ್ ಗೋಸೇವೆಯಲ್ಲಿ ನಾನಾಕಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ವಿಹಿಂಪ ಮುಖಂಡ ಭುಜಂಗ ಕುಲಾಲ್, ವೆಂಕಟರಮಣ ಆಸ್ರಣ್ಣ ಗೋಪೂಜೆ ನೆರವೇರಿಸಿದರು. ಗೋವುಗಳಿಗೆ ವಿವಿಧ ತಿನಿಸುಗಳನ್ನು ನೀಡಲಾಯಿತು. ಗೋಶಾಲಾ ಸಿಬಂದಿಗಳನ್ನು ಗೌರವಿಸಲಾಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಸದಾನಂದ ಆಸ್ರಣ್ಣ, ಸುಮನ್ ಶೆಟ್ಟಿ, ಜಯಕುಮಾರ ಮಯ್ಯ, ಸ್ವರಾಜ್ ಶೆಟ್ಟಿ, ದೇವದಾಸ ಮಲ್ಯ, ಈಶ್ವರ್, ಪುರುಷೋತ್ತಮ ಕೋಟ್ಯಾನ್, ಗುರುರಾಜ್, ಲೋಕಯ್ಯ ಸಾಲ್ಯಾನ್, ದಾಮೋದರ್, ಪ್ರಕಾಶ್, ಪಾರ್ಥಸಾರಥಿ, ದಿನೇಶ್, ತಾರಾನಾಥ ಶೆಟ್ಟಿ ಮತ್ತಿತರರಿದ್ದರು.