ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಹಳೆಯಂಗಡಿ ಶಾಖೆಯಲ್ಲಿ ಗ್ರಾಹಕರದಿನಾಚರಣೆ
Thursday, November 14, 2024
ದಿನಾಚರಣೆ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅವರು ಮಾತನಾಡಿ ಬ್ಯಾಂಕುಗಳು ಜನಸ್ನೇಹಿಯಾಗಿ ಗ್ರಾಹಕರ ಅಶೋತ್ತರಗಳನ್ನು ಈಡೇರಿಸಲಿ ಎಂದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷೆ ಪೂರ್ಣಿಮಾ ಮಧು, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಉಮಾನಾಥ ಜೆ ಶೆಟ್ಟಿಗಾರ್ ಗಣೇಶ್ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು ಅಧ್ಯಕ್ಷರಾದ ವಸಂತ್ ಬೆರ್ನಾಡ್ ಪ್ರಸ್ತಾವನೆಗೈದರು, ಸಿಬ್ಬಂದಿ ನಿರಂಜಲ ಪ್ರಾರ್ಥಿಸಿದರು, ಅಭಿಷ್ಟ ಜೈನ್ ಧನ್ಯವಾದ ಅರ್ಪಿಸಿದರು.