ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ವತಿಯಿಂದ ಅಂಗನವಾಡಿ ಕೇಂದ್ರ ಹುಣ್ಸೆಕಟ್ಟೆ ಶಾಂತಳಿಕೆ ಪೆರ್ಮುದೆ ಯಲ್ಲಿ ಗಾಂಧಿ ಜಯಂತಿ ಆಚರಣೆ
Wednesday, October 2, 2024
ಬಜಪೆ:ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ವತಿಯಿಂದ ಅಂಗನವಾಡಿ ಕೇಂದ್ರ ಹುಣ್ಸೆಕಟ್ಟೆ ಶಾಂತಳಿಕೆ ಪೆರ್ಮುದೆ ಯಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು.
ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಶೆಟ್ಟಿ,ಲಯನ್ಸ್ ಸದಸ್ಯ ಶಿವರಾಮ ಕೋಟ್ಯಾನ್ ಪೆರ್ಮುದೆ,
ಕ್ಲಬ್ ನಾ ನಿಕಟಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ, ಮಾಜಿ ಅಧ್ಯಕ್ಷ ಶಿವಪ್ರಸಾದ್ ಬಾಳ, ಅಂಗನವಾಡಿ ಶಿಕ್ಷಕಿ ಲೋಲಾಕ್ಷಿ, ಸ್ಥಳೀಯರಾದ ವಾಮನ ಸಾಲ್ಯಾನ್, ಮುದ್ದು ಗೌಡ, ಪ್ರಕಾಶ್, ಲತಾ ಮೊದಲಾದವರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ರಾಷ್ಟ್ರ ಪ್ರೇಮ ಬಿಂಬಿಸುವ ಕಾರ್ಯವಾಗಿ ಅನೇಕ ವರ್ಷಗಳಿಂದ ಇದೇ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಮತಾ ಇವರನ್ನ ಸನ್ಮಾನಿಸಲಾಯಿತು.