
ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ
Thursday, October 3, 2024
ಕಿನ್ನಿಗೋಳಿ:ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳು ಸೇವಾ ಕಾರ್ಯಗಳು ಇಂದಿನ ದಿನಗಳಲ್ಲಿಯೂ ಪ್ರಸ್ತುತವಾಗಿದೆ. ಅವರ ಸ್ವಚ್ಚ ಭಾರತದ ಕಲ್ಪನೆ ಸಾಕಾರಗೊಳ್ಳಬೇಕು ಎಂದು ಸಮಾಜ ಸೇವಕ ದಾಮೋದರ ಶೆಟ್ಟಿ ಮಾಡರ ಮನೆ ಹೇಳಿದರು. ಅವರು ಎಸ್. ಕೋಡಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಿನ್ನಿಗೋಳಿ ಪಟ್ಟಣ ಪಂಚಾಯತ್, ಕಿನ್ನಿಗೋಳಿ ವಲಯ ಟೈಲರ‍್ಸ್ ಎಸೋಶಿಯೆಶನ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಎಸ್. ಕೋಡಿ ಒಕ್ಕೂಟದ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಟೈಲರ‍್ಸ್ ಎಸೋಶಿಯೇಶನ್ ಗೌರವಾಧ್ಯಕ್ಷ ಶಂಕರ ಬಿ ಕೋಟ್ಯಾನ್ , ಸಂಸ್ಥೆಯ ಅಧ್ಯಕ್ಷ ವಸಂತ ಸಪಳಿಗ, ಜಿಲ್ಲಾ ಸಮಿತಿಯ ಮೋಹನ್ ಎಸ್. ಕೋಡಿ, ದಾಮೋದರ , ಕಾರ್ಯದರ್ಶಿ ಉಷಾ , ಕೊಶಾಧಿಕಾರಿ ಸುನೀತಾ ಸುವರ್ಣ, ಸರಿತಾ , ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ , ಸೇವಾ ಪ್ರತಿನಿಧಿ ವಿಶಲಾಕ್ಷಿ , ಮೊನಿಕಾ , ಪಟ್ಟಣ ಪಂಚಾಯತ್‌ನ ಚಂದ್ರ ಶೇಕರ್ ಬ್ರಹ್ಮಾನಂದ , ಚಂದ್ರ ಶೇಕರ್ , ಶಶಿಕಲಾ ಮತ್ತಿತತರು ಉಪಸ್ಥಿರಿದ್ದರು. ಎಸ್. ಕೋಡಿ ಬಸ್‌ನಿಲ್ದಾಣದಿಂದ ಪದ್ಮನೂರು ಶಾಲೆಯ ತನಕ ಸುಮಾರು ೧೦೦ ಸ್ವಯಂ ಸೇವಕರು ಪಾಲ್ಗೊಂಡರು.