
ಹಿರಿಯರನ್ನು ಮಕ್ಕಳಂತೆ ಪೋಷಿಸಬೇಕು - ಶೇಖರ ಶೆಟ್ಟಿ
Wednesday, September 4, 2024
ಬಜಪೆ: ಮನೆಯಲ್ಲಿ ಮಕ್ಕಳನ್ನು ನಾವು ಹೇಗೆ ಪ್ರೀತಿಯಿಂದ ಬೆಳೆಸುತ್ತೇವೆಯೋ, ಅದೇ ರೀತಿ ಹಿರಿಯರನ್ನೂ ಪ್ರೀತಿ ಮತ್ತು ಗೌರವದಿಂದ ಪೋಷಿಸಿದಾಗ ಮಾತ್ರ ಮಾನವೀಯ ಗುಣ ಸಾರ್ಥಕ್ಯ ಕಂಡುಬರುತ್ತದೆ ಎಂದು ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಶೇಖರ ಶೆಟ್ಟಿ ಹೇಳಿದರು.
ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ, ಲಯನ್ಸ್ ಕ್ಲಬ್ ಕಟೀಲು ಎಕ್ಕಾರು ವತಿಯಿಂದ ತೆಂಕ ಎಕ್ಕಾರು ಕಾವರ ಮನೆಯಲ್ಲಿ ಹರಿಣಾಕ್ಷಿ ಟಿ. ಶೆಟ್ಟಿ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಟಿಪಳ್ಳ ಕೃಷ್ಣಾಪುರ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ ,ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ), ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನಾ ಕಾರ್ಯದರ್ಶಿ ಡಾ.ಸಂತೋಷ್ ಆಳ್ವ, ಕೋಶಾಧಿಕಾರಿ ಅನುಪಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ದಯಾನಂದ ರೈ, ಮಾಜಿ ಕಾರ್ಯದರ್ಶಿ ಗಂಗಾಧರ ಅಮೀನ್, ಸದಸ್ಯ ಚಂದ್ರಶೇಖರ್ ಅಮೀನ್, ಶ್ವೇತಾ ದುರ್ಗಾಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.