
ಮಂಗಳೂರು ವಿವಿಯಲ್ಲಿ ಅವ್ಯವಹಾರ, ಉದ್ಯೋಗ ನೀಡಿಕೆಯಲ್ಲಿ ಬೇಧಭಾವ -ದಲಿತ ಸಂಘರ್ಷ ಸಮಿತಿ ಆರೋಪ
Wednesday, September 4, 2024
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸರಕಾರದ ನಿಯಮಗಳನ್ನು ಮೀರಿ ಕಾರ್ಯಾಚರಣೆ ನಡೆಯುತ್ತಿದೆ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಿರಿಸಿದ ಹುದ್ದೆಗಳನ್ನು ಮೇಲ್ಜಾತಿಯವರಿಗೆ ನೀಡಲಾಗುತ್ತಿದೆ. ಅನೇಕ ಹುದ್ದೆಗಳು ಖಾಲಿಯಿದ್ದು ಸರಕಾರದ ಆದೇಶ ಇದ್ದರೂ ಎಸ್ ಸಿ, ಎಸ್ ಟಿ ಸಮುದಾಯದ ನಿರುದ್ಯೋಗಿ ಯುವಜನತೆಗೆ ಉದ್ಯೋಗ ನೀಡಲಾಗುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅರುಣ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.
ವಿದ್ಯಾಸಂಸ್ಥೆಗಳಲ್ಲಿ ರಾಜಕಾರಣಕ್ಕೆ ಪ್ರಚೋದನೆ ನೀಡುವ ಯಾವುದೇ ಕೆಲಸವನ್ನು ಮಾಡಬಾರದು. ಇಲ್ಲಿ ವಿವಿಧ ಹುದ್ದೆಗಳಿಗೆ ಸ್ಪೀಕರ್ ಮತ್ತಿತರ ಜನಪ್ರತಿನಿಧಿಗಳ ರೆಫರೆನ್ಸ್ ಲೇಟರ್ ತರುವುದು, ಇನ್ಫ್ಲುಯೆನ್ಸ್ ಮಾಡುವುದು ನಡೆಯುತ್ತಿದೆ. ಇದನ್ನು ವಿಶ್ವವಿದ್ಯಾನಿಲಯ ಮತ್ತು ಜನಪ್ರತಿನಿಧಿಗಳು ನಿಲ್ಲಿಸಬೇಕು. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಉದ್ಯೋಗ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ“ ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ, ಸದಾಶಿವ ಹಳೆಯಂಗಡಿ, ಜಿಲ್ಲಾ ಖಜಾಂಜಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.