ವಿಜೃಂಭಣೆಯ ಎಕ್ಕಾರು ಪುದ್ದಾರ್ ಮೆಚ್ಚಿ ನೇಮೋತ್ಸವ
Friday, September 13, 2024
ಬಜಪೆ:ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಎಕ್ಕಾರು ಪುದ್ದಾರ್ ಮೆಚ್ಚಿ ನೇಮೋತ್ಸವವು ಬುಧವಾರದಂದು ರಾತ್ರಿ ಎಕ್ಕಾರು ನಡ್ಯೋಡಿಕರೆ ಬೊಳ್ಳಿ ಅಶ್ವಥ ಕಟ್ಟೆಯ ಬಳಿ ವಿಜೃಂಭಣೆಯಿಂದ ಜರುಗಿತು. ಪುದ್ದಾರ್ ಮೆಚ್ಚಿ ನೇಮೋತ್ಸವ ನಡೆದ ನಂತರ ಎಕ್ಕಾರು ಗ್ರಾಮದಲ್ಲಿ ಮನೆ ಮನೆಗಳಲ್ಲಿ ಕೊರಳು ಕಟ್ಟುವ ಸಂಪ್ರದಾಯವು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.ಬುಧವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಶ್ರೀ ದೈವಗಳ ಭಂಡಾರ ಮನೆಯಾದ ಎಕ್ಕಾರು ಕಾವರಮನೆಯಿಂದ ದೈವಗಳ ಭಂಡಾರ ಹೊರಟು ರಾತ್ರಿ ಪುದ್ದಾರ್ ಮೆಚ್ಚಿ ನೇಮೋತ್ಸವವು ಜರುಗುತ್ತದೆ.ಈ ಸಂದರ್ಭ ಎಕ್ಕಾರು ಶ್ರೀಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ,ನಾಲ್ಕು ಕರೆಗಳ ಪ್ರಮುಖರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.