-->


ಹೆದ್ದಾರಿಯಂಚಿನ  ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದ ಪಿಕಪ್

ಹೆದ್ದಾರಿಯಂಚಿನ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದ ಪಿಕಪ್

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿದ ಪಿಕಪ್  ವಾಹನವೊಂದು ಹೆದ್ದಾರಿಯಂಚಿನ ತಡೆಬೇಲಿಗೆ ಡಿಕ್ಕಿಹೊಡೆದು,ಹೆದ್ದಾರಿಯಲ್ಕಿಯೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ಮುಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ನಡೆದಿದೆ.ಘಟನೆಯಿಂದಾಗಿ  ಪಿಕಪ್ ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
 ಶಿವಮೊಗ್ಗ ಸಮೀಪದ ನ್ಯಾಮತ್ತಿ ಯ ನಿವಾಸಿಗಳಾದ ಚಾಲಕ ಹರೀಶ್ (31) ಮತ್ತು ನಿರ್ವಾಹಕ ಸುನಿಲ್ (28)  ಘಟನೆಯಲ್ಲಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. 
ಶಿವಮೊಗ್ಗ ಸಮೀಪದ ನ್ಯಾಮತ್ತಿ ಯಿಂದ ತರಕಾರಿ ಹೇರಿಕೊಂಡು ಮಂಗಳೂರಿಗೆ ತಲುಪಿಸಿ ವಾಪಾಸು ಶಿವಮೊಗ್ಗ ಕಡೆಗೆ ಹೋಗುತ್ತಿದ್ದಾಗ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಲಾಗಿದ್ದ  ಕಬ್ಬಿಣದ ತಡೆ ಬೇಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಬ್ಬಿಣದ ತಡೆ ಬೇಲಿ ಕಿತ್ತು ಬಂದಿದ್ದು ಪಿಕಪ್ ಗೆ ಹಾನಿಯಾಗಿದೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಮುಲ್ಕಿ ಪೊಲೀಸರು ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು , ಹೆದ್ದಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾಹನಗಳನ್ನು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಕಳುಹಿಸಲಾಯಿತು
ಬಳಿಕ ಕ್ರೇನ್ ಮೂಲಕ  ಪಿಕಪ್ ತೆರವುಗೊಳಿಸಲಾಯಿತು.

ವಿಡಿಯೋಗಾಗಿ ಕ್ಲಿಕ್ ಮಾಡಿ
https://youtu.be/DChyw4_uly8?si=ZJyFDYlpZ5zpwTK_

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article