ಮುಲ್ಕಿ:ಕ್ಷೀರ ಸಾಗರ ವಿವಿದ್ದೋದ್ದೇಶ ಸಹಕಾರಿ ಸಂಘ(ನಿ) ದ 2023-24 ನೇ ಸಾಲಿನಮಹಾಸಭೆ
Tuesday, September 24, 2024
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ನಿರ್ದೇಶಕರ ಹಾಗೂ ಸದಸ್ಯರ ಪಾತ್ರ ಪ್ರಮುಖವಾಗಿದ್ದು ಸಾಮಾಜಿಕ ಚಟುವಟಿಕೆ ಸಹಾಯ ಹಸ್ತದ ಮೂಲಕ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಲಿಡಿಯ ಫುಟಾಡೋ ನಿರ್ದೇಶಕರಾದ
ಹರೀಂದ್ರ ಸುವರ್ಣ, ಶಶಿಕಲಾ ಅಮೀನ್,ವೀರಪ್ಪ,ರಮೇಶ್ ಕೋಟ್ಯಾನ್,ಮೋಹನದಾಸ್, ಕಾರ್ಯನಿರ್ವಣಾಧಿಕಾರಿ ರಘುರಾಜ್ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಸಂಘದ ಸದಸ್ಯರಾದ ಯದೀಶ್ ಅಮೀನ್ ಹಾಗೂ
ಅಬ್ದುಲ್ ರಜಾಕ್ ರವರನ್ನು ಗೌರವಿಸಲಾಯಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಕಾರ್ಯದರ್ಶಿ ಸುಂದರ ಶೆಟ್ಟಿ ಕುಬೆವೂರು, ನಿರ್ದೇಶಕ ಸುಧಾಕರ ಶೆಟ್ಟಿ, ಸದಸ್ಯರಾದ ಹಿಮಕರ ಕೋಟ್ಯಾನ್, ಶಶಿಕಾಂತ ಶೆಟ್ಟಿ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿದರು.,ಕಾರ್ಯನಿರ್ವಣಾಧಿಕಾರಿ ರಘುರಾಜ್ ಧನ್ಯವಾದ ಅರ್ಪಿಸಿದರು .