ಕಟೀಲು ತಾಳಮದ್ದಲೆ ಸಪ್ತಾಹ ಉದ್ಘಾಟನೆ
Tuesday, September 24, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ನಡೆಯುವ ಇಪ್ಪತ್ತನೇ ವರುಷದ ತಾಳಮದ್ದಲೆ ಸಪ್ತಾಹ ಧ್ಯೇಯಃ ಪಂಚಮುಖೋ ರುದ್ರಃ ಸೋಮವಾರ ಉದ್ಘಾಟನೆಗೊಂಡಿತು.
ತಾಳಮದ್ದಲೆಯ ಖ್ಯಾತ ಅರ್ಥವಾದಿ ಕಟೀಲು ಮೇಳದ ಕಲಾವಿದ ಸುಣ್ಣಂಬಳ ವಿಶ್ವೇಶರ ಭಟ್ಟರ ಅರವತ್ತನೇ ವರ್ಷಾಚರಣೆಯ ಪ್ರಯುಕ್ತ ಈ ತಾಳಮದ್ದಲೆ ವಾಗ್ವಿಶ್ವ ವೈಭವ ಪರಿಕಲ್ಪನೆಯಲ್ಲಿ ನಡೆಯಲಿದ್ದು ಏಳೂ ದಿನಗಳ ತಾಳಮದ್ದಲೆಗಳಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಅರ್ಥ ಹೇಳಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಕಟೀಲು ಲಕ್ಷೀನಾರಾಯಣ ಅಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಸದಾನಂದ ಆಸ್ರಣ್ಣ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಗಿರೀಶ್ ಶೆಟ್ಟಿ ಕಟೀಲು, ಕಾರ್ಕಳ ರಾಮ ಭಟ್,
ಪಶುಪತಿ ಶಾಸ್ತ್ರಿ ವಾಸುದೇವ ಶಣೈ ಹಾಗೂ ಕಲಾವಿದರು ಉಪಸ್ಥಿತರಿದ್ದರು.