ಕಟೀಲು:ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಕಟೀಲು 2024 -2025 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ
Thursday, September 19, 2024
ಕಟೀಲು:ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜು ಕಟೀಲು 2024 -2025 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಬುಧವಾರದಂದು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು.
ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುತ್ತಾ ವಿದ್ಯಾರ್ಥಿಗಳ ಬದುಕಿನ ಮತ್ತು ಜವಾಬ್ದಾರಿ ಬಗ್ಗೆ ತಿಳಿಸಿ ದೇಶಭಕ್ತಿಯ ಮೂಲಕ ಸದೃಢ ದೇಶ ನಿರ್ಮಾಣಕ್ಕಾಗಿ ದುಡಿಯಬೇಕು ಆ ಮೂಲಕ ದೇವರ ಆಶೀರ್ವಾದ ನಮಗೆ ದೊರೆಯುವುದು ಎಂದರು.
ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಡೆವಲಪರ್ಸ್ ನ ಮಾಲಕ ಗಿರೀಶ್ ಎಂ ಶೆಟ್ಟಿಯವರು ವಿದ್ಯಾರ್ಥಿಗಳು ಹೇಗಿರಬೇಕು ತಮ್ಮನ್ನು ತಾವು ಪ್ರೀತಿಸುತ್ತಾ ಒಳ್ಳೆಯ ಅಭ್ಯಾಸವನ್ನು ಅಳವಡಿಸಿಕೊಂಡು ಚಿಕ್ಕಪುಟ್ಟ ಕೆಲಸವನ್ನು ಉತ್ತಮವಾಗಿ ನಡೆಸುತ್ತಾ ಬದುಕಿನಲ್ಲಿ ದೊಡ್ಡದಾದ ಸಾಧನೆಗಳನ್ನು ಮಾಡಬೇಕು. ಅದಕ್ಕಾಗಿ ನಮ್ಮ ಜೀವನ ಉತ್ತಮವಾಗಿ ನಡೆಸಬೇಕು ಎಂದರು.
ಶ್ರೀಮತಿ ಶಕುಂತಲ ನಿರೇಂದ್ರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಸಮಯದಲ್ಲಿ ಕ್ರೀಡೆ ಮತ್ತು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಆ ಮೂಲಕ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಜಯ್ ವಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯ ಜೊತೆಗೆ ಸಂಸ್ಥೆಯ ಕ್ರೀಯಾಶೀಲ ಚಟುವಟಿಕೆಗಳ ಬಗ್ಗೆ ತಿಳಿಸಿ ವಿದ್ಯಾ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ದುಡಿಯೋಣ ಎಂದರು.
ವಿದ್ಯಾರ್ಥಿನಿ ಕೃಪಾ ಮತ್ತು ಬಳಗದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗಿರೀಶ್ ಎಂ ಶೆಟ್ಟಿ ಹಾಗೂ ಶ್ರೀಮತಿ ಶಕುಂತಲ ನಿರೇಂದ್ರ ಅವರನ್ನು ಗೌರವಿಸಲಾಯಿತು.ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ , ತರಗತಿ ನಾಯಕರಿಗೆ ಹಾಗೂ ವಿವಿಧ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಿಗೆ ವಿದ್ಯಾರ್ಥಿ ಕ್ಷೇಮಾಪಾಲನ ಅಧಿಕಾರಿ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗಿರೀಶ್ ಎಮ್ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿನಿ ,ಭಾರತ್ ಬ್ಯಾಂಕ್ (ಮುಂಬಾಯಿ) ಮುಲ್ಕಿ ಶಾಖೆಯ ಮ್ಯಾನೇಜರ್ ಶ್ರೀಮತಿ ಶಕುಂತಲ ನಿರೇಂದ್ರ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಹಾಗೂ ತರಗತಿ ನಾಯಕರಿಗೆ ಬ್ಯಾಡ್ಜ್ ನೀಡಿ ಗೌರವಿಸಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪಟ್ಟಿಯನ್ನು ಉಪನ್ಯಾಸಕಿ ಶ್ರೀಮತಿ ಶಿಫಾಲಿ ವಾಚಿಸಿದರು. ಅತಿಥಿ ಗಣ್ಯರ ಕಿರು ಪರಿಚಯವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಕು। ಪೂಜಾ ಹಾಗೂ ಕು। ಯೋಗಿನಿ ಸುಷ್ಮಾ ಶೆಟ್ಟಿ ವಾಚಿಸಿದರು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಪೂಜಾ ಕಾಂಚನ್ ಸ್ವಾಗತಿಸಿ , ವಿದ್ಯಾರ್ಥಿನಿ ಕು। ಪ್ರಿಯಾಂಕ ವಂದಿಸಿದರು. ಕು। ಪ್ರಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಾಂಕ್ , ಉಪಾಧ್ಯಕ್ಷ ಆದಿತ್ ಆರ್ ಶೆಟ್ಟಿ , ಕಾರ್ಯದರ್ಶಿ ಮನೀಶ್ , ಜೊತೆ ಕಾರ್ಯದರ್ಶಿ ಕು। ತೃಶಾ ಶೆಟ್ಟಿ ಹಾಗೂ ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು . ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೀ ವತ್ಸ , ಸುಹಾಸ್ ರಾವ್ , ಕು। ಹರ್ಷಿತಾ , ಕು। ಪ್ರಥ್ವೀ ನಡೆಸಿಕೊಟ್ಟರು
ತ್ರಿಷಾ ಮತ್ತು ಬಳಗದವರು ಪ್ರಾರ್ಥಿಸಿದರು.