ಹಳೆಯಂಗಡಿ:ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಭಿನ್ನ ವೇಷ ಧರಿಸಿ ಆಶಕ್ತರಿಗೆ ನೆರವು
Wednesday, September 18, 2024
ಹಳೆಯಂಗಡಿ : ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಶೆಟ್ಟಿ ನೇತೃತ್ವದ ಸಹೃದಯಿ ಗೆಳೆಯರು ಪಡುಪಣಂಬೂರು ತಂಡ ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಭಿನ್ನ ವೇಷ ಧರಿಸಿ ಅಶಕ್ತರಿಗೆ ನೆರವಾಗಿದ್ದಾರೆ.
ಈ ಬಾರಿಯೂ ಅವರ ವಿಭಿನ್ನ ವೇಷಕ್ಕೆ ಸಾರ್ವಜನಿಕ ರಿಂದ ಮೆಚ್ಚುಗೆ ವ್ಯಕ್ತವಾಗಿದ್ದು,ಸಾರ್ವಜನಿಕರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ಒಟ್ಟು ಮೊತ್ತವನ್ನು ಹಳೆಯಂಗಡಿ ಜಾರಂದಾಯ ದೈವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಡ್ವೆಯ ಶ್ರಧ್ಧಾ ಸುನಿಲ್ ದಂಪತಿಯ ಮಗುವಿನ ಚಿಕಿತ್ಸೆಗೆ 1,59,021 ರೂ ಮತ್ತು ಸವಿತಾ ಲಿಂಗಪ್ಪಯ್ಯಕಾಡು ಚಿಕಿತ್ಸೆಗೆ25,021 ರೂ ನೀಡಿದರು.
ಈ ಸಂದರ್ಭದಲ್ಲಿ ಹೊಯ್ಗಗುಡ್ಡೆ ಉಮಾಮಹೇಶ್ವರ ದೇವಾಲಯದ ರಾಮ್ ಭಟ್ , ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ,
ಮುಲ್ಕಿ ವಿಜಯ ರೈತರ ಸಂಘದ ಅಧ್ಯಕ್ಷ ರಂಗನಾಥ್ ಶೆಟ್ಟಿ , ಉದ್ಯಮಿ ನವೀನ್ ಶೆಟ್ಟಿ ಮುಲ್ಕಿ , ಗೆಳೆಯರ ಬಳಗ ಸುರತ್ಕಲ್ ನ ನಾಗೇಶ್ ಪೂಜಾರಿ,
ಸುಭಾಷ್ ಕಾಮತ್ ಮುಲ್ಕಿ, ಪ್ರಭಾಕರ ದೇವಾಡಿಗ ಮುಲ್ಕಿ , ಪ್ರವೀಣ್ ಕೊಲ್ಲೂರು, ರಾಜೇಂದ್ರ ಜೈನ್ , ಚಂದ್ರನಾಥ್ ಜೈನ್, ಮೋಹನ್ ಕುಂದರ್, ವಿನಯ್ ಕಾಂಚನ್, ವರದ್ ಕಾಂಚನ್, ರಾಜೇಶ್ ಶೆಟ್ಟಿಗಾರ್, ರಮೇಶ್ ದೇವಾಡಿಗ,
ದೀಪಕ್ ಬಂಗೇರ ಮತ್ತು
ಶ್ರೀ ಭಗವತಿ ಯುನೈಟೆಡ್ ಫ್ರೆಂಡ್ಸ್ ಕದಿಕೆಯ ಸದಸ್ಯರು ,
ಸಹೃದಯಿ ಗೆಳೆಯರು ಪಡುಪಣಂಬೂರು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು