-->


ಮಕ್ಕಳಲ್ಲಿ ಏಕಾಗ್ರತೆ ಸ್ಥಾಯಿ ಯಾಗುವ ಬಗೆ ಹೇಗೆ -    ಮಾಹಿತಿ ಕಾರ್ಯಕ್ರಮ

ಮಕ್ಕಳಲ್ಲಿ ಏಕಾಗ್ರತೆ ಸ್ಥಾಯಿ ಯಾಗುವ ಬಗೆ ಹೇಗೆ - ಮಾಹಿತಿ ಕಾರ್ಯಕ್ರಮ

 


ಬಜಪೆ:  ವಿವೇಕ ಜಾಗೃತಿ ಬಳಗ ಮುಲ್ಕಿ, (ಡಿವೈನ್ ಪಾರ್ಕ್ ಟ್ರಸ್ಟ್ (ರಿ) ಸಾಲಿಗ್ರಾಮ ಉಡುಪಿ ಜಿಲ್ಲೆ ಇದರ ಅಂಗ ಸಂಸ್ಥೆ)  ವತಿಯಿಂದ "ವಿದ್ಯಾರ್ಥಿ ದೀಪ" ಕಾರ್ಯಕ್ರಮದ ಅಡಿಯಲ್ಲಿ,  ಮಕ್ಕಳಲ್ಲಿ ಏಕಾಗ್ರತೆ ಸ್ಥಾಯಿ ಯಾಗುವ ಬಗ್ಗೆ ಹೇಗೆ?   ಎನ್ನುವ ವಿಷಯದ ಬಗ್ಗೆ  ಮಾಹಿತಿ ಕಾರ್ಯಕ್ರಮವು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರದಂದು ನಡೆಯಿತು.ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್  ನೀರುಡೆ - ಕಟೀಲು ಘಟಕದ ಅಧ್ಯಕ್ಷ ಸ್ಟ್ಯಾನೀ ಮಿರಾಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಡಿವೈನ್ ಪಾರ್ಕ್ ಸಾಲಿಗ್ರಾಮ  ಇಲ್ಲಿಯ L2 ಅಧಿಕಾರಿಗಳಾದ ಶ್ರೀಮತಿ ಪ್ರೇಮ ಪ್ರಭಾಕರ್ ಅವರು  ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ
ಮನಸ್ಸಿನ ಏಕಾಗ್ರತೆಯ ಬಗ್ಗೆ  ಸ್ವಾಮಿ ವಿವೇಕಾನಂದರು ನೀಡಿರುವ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಪಂಚೇಂದ್ರಿಯಗಳಿಂದ ಸಂಗ್ರಹಿಸಿದ ವಿಷಯಗಳು ನಮ್ಮ ಮನಸ್ಸಿಗೆ ತಲುಪುತ್ತದೆ. ಮನಸ್ಸಿನಿಂದ ಬುದ್ದಿಗೆ ವಿಷಯಗಳು ತಲುಪಿ  ಬುದ್ಧಿಯಿಂದ ಚಿತ್ತಕ್ಕೆ ನಮಗೆ ವಿಷಯಗಳು ತಲುಪುತ್ತದೆ. ಚಿತ್ರದಲ್ಲಿ ಸಂಗ್ರಹವಾದ ವಿಷಯಗಳು ನಮ್ಮ ನಮ್ಮಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕೋಪದ ಗುಣಗಳನ್ನು ಕಡಿಮೆ ಮಾಡುವುದರಿಂದ ಏಕಾಗ್ರತೆ ಹೆಚ್ಚಿಸಬಹುದು.ಯತ್ ಭಾವಂ ತದ್ಭವತಿ ಎನ್ನುವ ಮಾತಿನಂತೆ ನಮ್ಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗಾಗಿ ನಾವು ಯಾವಾಗಲೂ ಧನಾತ್ಮಕವಾಗಿ ಯೋಚನೆಗಳನ್ನು ಮಾಡಬೇಕು.ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವಾಗ ನಾನು ಪ್ರತಿದಿನ ಎಲ್ಲಾ ವಿಚಾರಗಳಲ್ಲೂ ಉತ್ತಮಗೊ ಗೊಳ್ಳುತ್ತಿದ್ದೇನೆ ಎನ್ನುವ ಸೂಚನೆಯನ್ನು ನಾವು ದಿನನಿತ್ಯ ನಮಗೆ ಹೇಳಿಕೊಳ್ಳುವುದು. ನಾವು ಕಲಿಯುವ ವಿಷಯವನ್ನು ಪ್ರೀತಿಸುವುದು ಮತ್ತು ಗುರುಗಳನ್ನು ಗೌರವಿಸುವುದು, ನಾನು ದಡ್ಡ ಅಲ್ಲ ನಾನು ಉತ್ತಮ ಅನ್ನುವಂತದ್ದನ್ನು ನಮಗೆ ನಾವೇ ಹೇಳಿಕೊಳ್ಳುವುದು, ಪ್ರಪಂಚದಲ್ಲಿ ನಮ್ಮನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಗಳು ನಮ್ಮ ತಂದೆ ತಾಯಿಗಳು ಅವರನ್ನು ನಾವು ಗೌರವಿಸಬೇಕು ಎಂದರು.

ಪ್ರಸ್ತುತ ವರ್ಷ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳಿಗೆ ಮನಸ್ಸಿನಲ್ಲಿರುವ ಸುಪ್ತ ಭೀತಿಯು ನಮ್ಮ ಮರೆವಿಗೆ ಕಾರಣವಾಗುತ್ತದೆ. ಸುಪ್ತ ಭೀತಿಯನ್ನು ಹೋಗಲಾಡಿಸಲು ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದರ  ಆಧಾರದಲ್ಲಿ ನಮ್ಮ ದಿನನಿತ್ಯದ ಅಭ್ಯಾಸವನ್ನು ನಡೆಸಬೇಕು ಎಂದರು.
 ಈ ಸಂದರ್ಭ ವಿವೇಕ ಜಾಗೃತಿ ಬಳಗ ಮೂಲ್ಕಿ ಅಧ್ಯಕ್ಷ ಶ್ರೀನಿವಾಸ್ ಶ್ರೀಯಾನ್
ವಿವೇಕ ಜಾಗೃತ ಬಳಗದ ಪದಾಧಿಕಾರಿಗಳಾದ ಶ್ರೀಮತಿ ಸುಧಾ ಶ್ರೀಯಾನ್, ಶ್ರೀಮತಿ ಲಲಿತಾ ಭಾಸ್ಕರ್, ಚಂದ್ರಶೇಖರ್, ಪೋಷಕ ಪ್ರತಿನಿಧಿಗಳಾದ ನಾಗೇಶ್ ಅಮೀನ್, ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಇಂದಿರಾ ಎನ್ ರಾವ್ ಉಪಸ್ಥಿತರಿದ್ದರು.

ಶ್ರೀಮತಿ ವಿದ್ಯಾ ಗೌರಿ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ರಾಜಶ್ರೀ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article