ಪಂಜ - ಕೊಯ್ಕುಡೆ -ಮಧ್ಯ ಸಂಪರ್ಕ ರಸ್ತೆ ಜಲಾವೃತ,ರಸ್ತೆ ಬಂದ್
Thursday, August 1, 2024
ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ಕೊಯ್ಕುಡೆ -ಮಧ್ಯ ಸಂಪರ್ಕ ರಸ್ತೆ ಜಲಾವೃತವಾಗಿದೆ. ಪಂಜ, ಕೊಯಿಕುಡೆ, ಮೊಗಪಾಡಿ, ಉಲ್ಯ, ಬೈಲಗುತ್ತು ಪರಿಸರದ ಸುಮಾರು 100 ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಮುಂಜಾಗರೂಕತೆಯ ಕ್ರಮವಾಗಿ ಪಂಜ - ಮಧ್ಯ ಸಂಪರ್ಕ ರಸ್ತೆಗೆ ಪಂಚಾಯತ್ ಮುಖಾಂತರ ಬ್ಯಾರಿಕೇಡ್ ನ್ನು ಇಡಲಾಗಿದ್ದು,ರಸ್ತೆ ಬಂದ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೃಷಿಕರಾದ ಸತೀಶ್ ಎಂ ಶೆಟ್ಟಿ ಬೈಲಗುತ್ತು ಮಾಹಿತಿಯನ್ನು ನೀಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ದೇವಾಡಿಗ ಪಂಜ, ಕೇಶವ ಪೂಜಾರಿ ಪಂಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.