ವಿಶೇಷ ಬಾಲಕಿಯ ಅಭೂತಪೂರ್ವ ಶೈಕ್ಷಣಿಕ ಸಾಧನೆಯನ್ನು ಗುರುತಿಸಿದ ಶ್ರೀರಾಮ ಭಜನಾ ಮಂಡಳಿ, ರಾಮನಗರ ,ಅಂಗರಗುಡ್ಡೆ
Saturday, August 17, 2024
ಮೂಲ್ಕಿ:ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಆದರೆ ಸಾಧಿಸುವ ಮನೋಬಲ, ಛಲ ನಮ್ಮಲ್ಲಿರಬೇಕು ಎಂದು ಶ್ರೀರಾಮ ಭಜನಾ ಮಂಡಳಿ, ರಾಮನಗರ ,ಅಂಗರಗುಡ್ಡೆಯ ಅಧ್ಯಕ್ಷ ಸಂಪತ್ ಕುಮಾರ್ ಹೇಳಿದರು.ಅವರು 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಗಮನಾರ್ದ ಸಾಧನೆಯನ್ನು ಮಾಡಿದ ಮನುಶ್ರೀ ದೇವಾಡಿಗ ಕೆಂಚನಕೆರೆ ಇವರನ್ನು ಗೌರವಿಸಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಮನುಶ್ರೀ ದೇವಾಡಿಗ ಇವರ ತಂದೆ ತಾಯಿಗಳಾದ ಸುನೀತಾ ಕಿಶೋರ್ ದೇವಾಡಿಗ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿಗಾರ್, ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಜೀವನ್ ಶೆಟ್ಟಿ ಅಂಗರಗುಡ್ಡೆ, ಜಿತೇಶ್ ಕೋಟ್ಯಾನ್, ಸತೀಶ್ ಆಚಾರ್ಯ, ರೋಷನ್ ಸಾಲ್ಯಾನ್, ಪ್ರವೀಣ್ ಶೆಟ್ಟಿ,ತಾರನಾಥ ದೇವಾಡಿಗ , ಭಾಸ್ಕರ್ ಶೆಟ್ಟಿಗಾರ್ ಪುರುಷೋತ್ತಮ್ ದಾಸ್, ಚಂದ್ರಶೇಖರ್, ಸುಧೀರ್ ಶೆಟ್ಟಿ, ಸತೀಶ್ ಪೂಜಾರಿ, ದಿನೇಶ್ ಕೋಟ್ಯಾನ್, ಸುಕೇಶ್ ಸನಿಲ್, ರಾಜೇಶ್ ದೇವಾಡಿಗ, ಆನಂದ್ ಹಾಗೂ ಮಹಿಳಾ ಸದಸ್ಯರಾದ ಅನಿತಾ ಶೆಟ್ಟಿ, ಪುಷ್ಪ ಸಾಲ್ಯಾನ್, ರಮಣಿ, ಜಯಲಕ್ಷ್ಮಿ, ಮಂಜುಳಾದೇವಾಡಿಗ, ವಿನೋದ, ಸುಕನ್ಯ ಸಂಪತ್,ರೂಪ ಶೆಟ್ಟಿಗಾರ್ ಹಾಗೂ ಮಂದಿರದ ಸದಸ್ಯರುಗಳು ಉಪಸ್ಥಿತರಿದ್ದರು.