ಅಧ್ಯಯನಶೀಲತೆಯ ಸಾಹಿತ್ಯಿಕ ಉಪಾಸಕ ಡಾ.ಹರಿಶ್ಚಂದ್ರ ಪಿ. ಸಾಲ್ಯಾನ್ -ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
Sunday, August 4, 2024
ಮುಲ್ಕಿ: ಜೀವನದಲ್ಲಿ ಸವಾಲುಗಳನ್ನು ಸಂತೋಷದಿಂದ ಎದುರಿಸಿಕೊಂಡು ಮುಂದಿನ ಯುವ ಪೀಳಿಗೆಗೆ ತಮ್ಮ ಲೇಖನದ ಮೂಲಕ ತುಳುನಾಡಿನ ಸಂಸ್ಕಾರ ಸಂಸ್ಕೃತಿ ಪರಿಚಯಿಸಿ ಸಾಧನೆ ಮಾಡಿ ಸಾಧಕರಾದ ಡಾ. ಹರೀಶ್ಚಂದ್ರ ಸಾಲ್ಯಾನ್ ರವರು ಓರ್ವ ಅಧ್ಯಯನಶೀಲತೆಯ ಸಾಹಿತ್ಯಿಕ ಉಪಾಸಕ ಎಂದು ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಅವರು ಸಾಹಿತಿ, ಸಮಾಜ ಸೇವಕ,ಧಾರ್ಮಿಕ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ
ಆರ್ಯಭಟ ಪ್ರಶಸ್ತಿ ಹಾಗೂ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ
ಮಂಡಳಿಯವರಿಂದ ಪ್ರಶಸ್ತಿ ಪಡೆದ ಡಾ.ಹರಿಶ್ಚಂದ್ರ ಪಿ. ಸಾಲ್ಯಾನ್ ರವರನ್ನು ಸಾಧಕರ ನೆಲೆಯಲ್ಲಿ ಕಿಲ್ಪಾಡಿಯ ತಮ್ಮ ಆಶ್ರಮದಲ್ಲಿ ಗೌರವಿಸಿ ಮಾತನಾಡಿ ಡಾ. ಸಾಲ್ಯಾನ್ ರವರ ಸಾಧನೆ ನಿರಂತರವಾಗಿ ನಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಉನ್ನತ ಸಾಧಕರಾಗಲಿ ಎಂದು ಶುಭ ಹಾರೈಸಿದರು
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು
ಪುನೀತ್ ಕೃಷ್ಣ ಸ್ವಾಗತಿಸಿ ನಿರೂಪಿಸಿದರು ಗುರುಪ್ರಸಾದ್ ಭಟ್ ಧನ್ಯವಾದ ಅರ್ಪಿಸಿದರು