ಮೂಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್‌ನ ಸದಸ್ಯತನ ಅಭಿಯಾನಕ್ಕೆ ಉತ್ತಮ ಸ್ಪಂದನೆ : ಮಿಥುನ್ ರೈ
Thursday, August 15, 2024
ಮೂಲ್ಕಿ : ಯುವ ಸಮುದಾಯವನ್ನು ರಾಜಕೀಯವಾಗಿ ವೇದಿಕೆ ನೀಡಿ ಅವರಿಗೆ ಸಾಮರಸ್ಯದ ರಾಜಕಾರಣವನ್ನು ಕಲ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮಹತ್ವದ ಅಭಿಯಾನವಾದ ಯುವ ಕಾಂಗ್ರೆಸ್ ಸದಸ್ಯತನ ಅಬಿಯಾನವು ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಯಶಸ್ಸಾಗುವುದು ನಿಶ್ವಿತ ಇಂದು ರಾಜ್ಯದಲ್ಲಿಯೇ ಯುವ ಕಾಂಗ್ರೆಸ್‌ನ ಸಂಘಟನಾತ್ಮಕ ಶಕ್ತಿಗೆ ಬಲ ತುಂಬಿತ್ತಲಿರುವ ಯುವ ಸಮುದಾಯವು ಹೆಚ್ಚೆಚ್ಚು ಸದಸ್ಯರಾಗಿ ರಾಜಕೀಯದ ಮೂಲಕ ಸಮಾಜ ಸೇವೆಯನ್ನು ಮಾಡಬೇಕು ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಅವರು ಹಳೆಯಂಗಡಿಯ ಮೂಲ್ಕಿ ಬ್ಯಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್‌ನ ಮೂಲ್ಕಿ ಮತ್ತು ಮೂಡಬಿದಿರೆ ಬ್ಲಾಕ್‌ನ ಯುವ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್ ಅವರು ಯುವ ಕಾಂಗ್ರೆಸ್‌ನ ಅಭಿಯಾನ ಹಾಗೂ ಸದಸ್ಯರಾದವರ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.
ಮೂಲ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ ಸ್ವಾಗತಿಸಿ, ನಿರೂಪಿಸಿದರು.
ಕಾಂಗ್ರೆಸ್‌ನ ವಿವಿಧ ನಾಯಕರಾದ ಚಂದ್ರಹಾಸ ಸನಿಲ್, ಸಾಹುಲ್ ಹಮೀದ್, ಮಂಜುನಾಥ ಕಂಬಾರ್, ಜಾಕ್ಸನ್, ಮೋಕ್ಷ, ಆದರ್ಶ ಮತ್ತಿತರರು ಉಪಸ್ಥಿತರಿದ್ದರು.
-೦-