ಗುರುಪುರ ಬಿಲ್ಲವ ಸಮಾಜ ಸೇವಾಸಂಘದಲ್ಲಿ ಗುರು ಜಯಂತಿ ಆಚರಣೆ
Sunday, August 25, 2024
ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಹಾಗೂ ಸ್ಪೂರ್ತಿ ಬಿಲ್ಲವ ಮಹಿಳಾ ಘಟಕ ಇದರ ವತಿಯಿಂದ ಆ. 5ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನೋತ್ಸವ `ಗುರು ಜಯಂತಿ'ಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಗಣಹೋಮ ನಡೆಯಿತು. 9 ಗಂಟೆಯಿಂದ ಮಹಾಪೂಜೆಯವರೆಗೆ ವಿವಿಧ ತಂಡಗಳಿಂದ ಭಜನೆ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ನೂರೂರು ಮಂದಿ ಪಾಲ್ಗೊಂಡಿದ್ದರು