ಬಿಲ್ಲವ ಸಮಾಜ ಸೇವಾ ಸಂಘ (ರಿ) ಎಕ್ಕಾರು ಪೆರ್ಮುದೆ ವತಿಯಿಂದ 3ನೇ ವರ್ಷದ ವಾರ್ಷಿಕ ಕ್ರೀಡಾಕೂಟ
Sunday, August 18, 2024
ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ (ರಿ) ಎಕ್ಕಾರು ಪೆರ್ಮುದೆ ವತಿಯಿಂದ ಸಂಘದ ವಠಾರದಲ್ಲಿ ಭಾನುವಾರದಂದು ನಡೆದ 3ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಬಿಲ್ಲವ ಸಮಾಜ ಸೇವಾ ಸಂಘ (ರಿ) ಎಕ್ಕಾರು ಪೆರ್ಮುದೆಯ ಅರ್ಚಕ ಹೊನ್ನಯ್ಯ ಅಮೀನ್ ಅವರು
ಉದ್ಘಾಟಿಸಿದರು.ಉದ್ಘಾಟನೆಗೂ ಮೊದಲು ಶ್ರೀ ನಾರಾಯಣ ಗುರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ವಾರ್ಷಿಕ ಕ್ರೀಡಾಕೂಟದಲ್ಲಿ ವಾಲಿಬಾಲ್ ,ಮಡಿಕೆ ಒಡೆಯುವ ಸ್ಪರ್ಧೆ ಹಾಗೂ ಮತ್ತಿತರ ಸ್ಪರ್ಧೆಗಳು,ಚಿಕ್ಕ ಮಕ್ಕಳಿಗಾಗಿ ಕಪ್ಪೆಜಿಗಿತ,ಓಟ ದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಬಿಲ್ಲವ ಸಮಾಜ ಸೇವಾ ಸಂಘ (ರಿ) ಎಕ್ಕಾರು ಪೆರ್ಮುದೆಯ ಅಧ್ಯಕ್ಷ
ಪ್ರಕಾಶ್ ಕುಕ್ಯಾನ್,ಉಪಾಧ್ಯಕ್ಷ ಯೋಗಿಶ್ ಕೋಟ್ಯಾನ್ ,ಗೌರವ ಸಲಹೆಗಾರರಾದ ಸುಧಾಕರ ಪೂಜಾರಿ ಮುಕ್ಕೋಡಿ,ಚಂದ್ರಹಾಸ ಪೂಜಾರಿ,ಪ್ರಮುಖರಾದ ದಯಾನಂದ ಪೂಜಾರಿ,ದಿನೇಶ್ ಕುಕ್ಯಾನ್ ,ಸುದೀಪ್ ಅಮೀನ್,ನವೀನ್ ಅಮೀನ್ ಹಾಗೂ ಮತ್ತಿತರರು ಇದ್ದರು.